ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಂಗೊಳಿಸುತ್ತಿದೆ ಇಂಡಸ್ಟ್ರಿಯಲ್ ಏರಿಯಾ! ಸ್ಥಳೀಯರು ಫುಲ್ ಖುಷ್

ಹುಬ್ಬಳ್ಳಿ: ಹಲವಾರು ಮೂಲಸೌಲಭ್ಯಗಳ ಕೊರತೆಯ ಗೂಡಾದ ಗೋಕುಲ ರಸ್ತೆಯಲ್ಲಿ, ಸ್ವತಃ ಉದ್ಯಮಿಗಳು ಕಾಲಿಡಲು ಹಿಂಜರಿಯುತ್ತಿದ್ದ ಇಂಡಸ್ಟ್ರಿಯಲ್ ಏರಿಯಾ ಈಗ ಉತ್ತಮ ಸೌಕರ್ಯಗಳಿಂದ ಕಂಗೊಳಿಸುವಂತಾಗಿದೆ.

ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕಾಲಿಡಲಾಗದಂತಹ ಕೆಸರು, ಕಿತ್ತು ಹೋದ ರಸ್ತೆಗಳು, ಒಡೆದು ಹೋದ ಚರಂಡಿಗಳು ಹೀಗೆ ಹಲವಾರು ಸಮಸ್ಯೆಗಳಿಂದ ಕೂಡಿದ್ದ ಇಂಡಸ್ಟ್ರಿಯಲ್ ಏರಿಯಾ, ಈ ವಸಾಹತುವಿನಲ್ಲಿ ಕಳೆದ 5 ದಶಕಗಳಿಂದ ತಲೆದೋರಿದ್ದವು. ಮೂಲ ಸೌಲಭ್ಯ ಒದಗಿಸುವ ಮೂಲಕ ಈ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿಪಡಿಸಬೇಕೆಂಬ ಕೈಗಾರಿಕೋದ್ಯಮಿಗಳ ಬೇಡಿಕೆಗೆ, ಸರ್ಕಾರದಿಂದ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಇದೀಗ ಸರ್ಕಾರ ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಕಂಪನಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು, ಈ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಕೈಗಾರಿಕೋದ್ಯಮಿಗಳನ್ನು ಇಲ್ಲಿ ಕರೆದುಕೊಂಡು ಹೋಗಲು ಸ್ಥಳೀಯರು ಮುಜುಗರಪಡುವಂತಹ ಸ್ಥಿತಿ ಎದುರಾಗಿತ್ತು, ಇದೀಗ ಈ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆತಿದೆ. 50 ವರ್ಷಗಳ ನಂತರ ಗೋಕುಲ ರಸ್ತೆಯ ಕೈಗಾರಿಕಾ ವಸಾಹತುವಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಿವೆ.

Edited By : Manjunath H D
Kshetra Samachara

Kshetra Samachara

18/02/2021 10:51 am

Cinque Terre

30.88 K

Cinque Terre

6

ಸಂಬಂಧಿತ ಸುದ್ದಿ