ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ಸ್ತಬ್ಧವಾಗಿದ್ದ ವಿಮಾನಯಾನ ಆನ್ ಲಾಕ್ ಬಳಿಕ ಸಾಕಷ್ಟು ಚೇತರಿಕೆ ಕಂಡಿದ್ದು,ಈಗ ಏರ್ ಇಂಡಿಯಾ ಹೊಸ ನಿರ್ಧಾರಕ್ಕೆ ಮುಂದಾಗಿದ್ದು,ಈ ಸೇವೆ ಹುಬ್ಬಳ್ಳಿ-ಮುಂಬೈ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹೌದು..ಹುಬ್ಬಳ್ಳಿಯಿಂದ ಮುಂಬೈಗೆ aaihbxairport to Mumbai - BOM -HBX- BOM AI507/AI508 ವಿಮಾನ ವಾರದಲ್ಲಿ ಮೂರುದಿನ ಸಂಚರಿಸಲಿದೆ. ಮಂಗಳವಾರ, ಶುಕ್ರವಾರ ಹಾಗೂ ಶನಿವಾರ ಸಂಚರಿಸಲಿದ್ದು,ವಿಮಾನ ಪ್ರಯಾಣಕ್ಕೆ ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಾಪಕ ಪ್ರಮೋದ ಠಾಕ್ರೆ ನೇತೃತ್ವದಲ್ಲಿ ಏರ್ ಇಂಡಿಯಾ ಹುಬ್ಬಳ್ಳಿ-ಮುಂಬೈ ಸೇವೆಗೆ ಚಾಲನೆ ನೀಡಲಾಯಿತು.
Kshetra Samachara
17/02/2021 06:17 pm