ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಲ್ಲರದ್ದೂ ಒಂದೇ ಗೋಳು, ಸಾರಿಗೆ ಸೌಲಭ್ಯ ಸರಿ ಇಲ್ಲಾ

ಕುಂದಗೋಳ : ನಿತ್ಯ ಬೆಳಗಾದ್ರೇ ಸಾಕು, ಹಳ್ಳಿಗಳಿಂದ ಶಿಕ್ಷಣ ಅರಸಿ ನಗರದ ಎಡೆ ಓಡೋ ಎಲ್ಲ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಸಿಗದೇ ಇರುವುದು ಕುಂದಗೋಳ ತಾಲೂಕಿನ ವಿದ್ಯಾರ್ಥಿಗಳಿಗೆ ದೊಡ್ಡ ಗೋಳಾಗಿದೆ.

ಬರೋಬ್ಬರಿ 58 ಹಳ್ಳಿಗಳನ್ನು ಒಳಗೊಂಡ ತಾಲೂಕಿನಲ್ಲಿ ಕುಂದಗೋಳ ಹಾಗೂ ಹುಬ್ಬಳ್ಳಿಗೆ ಶಿಕ್ಷಣ ಅರಸಿ ಓಡೋ ಮಕ್ಕಳಿಗೆ ಅವರವರ ಹಳ್ಳಿಗಳಿಂದಲೇ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲಾ.

ಇನ್ನು ಕುಂದಗೋಳ ಪಟ್ಟಣ ತಲುಪಿದ ಮೇಲಂತೂ ಹುಬ್ಬಳ್ಳಿ ಬಸ್ ಏರಲು ಕನಿಷ್ಠ ಒಂದು ಗಂಟೇ ಕಾಯಲೇಬೇಕು.

ಈಗಾಗಲೇ ಈ ವ್ಯವಸ್ಥೆಗೆ ಬೇಸತ್ತ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ರೂ ಇವರ ಸಮಸ್ಯೆ ಬಗೆಹರಿದಿಲ್ಲ, ಮುಖ್ಯವಾಗಿ ಹುಬ್ಬಳ್ಳಿ ಲಕ್ಷ್ಮೇಶ್ವರ, ಶಿರೂರು, ಸಂಶಿ, ದೇವನೂರು, ಗುಡೇನಕಟ್ಟಿ, ಯರೇಬೂದಿಹಾಳ, ತರ್ಲಘಟ್ಟ, ಕಮಡೊಳ್ಳಿ, ಗುಡೇನಕಟ್ಟಿ ಗ್ರಾಮ ಸೇರಿದಂತೆ ಅನೇಕ ಹಳ್ಳಿಗಳ ಮಕ್ಕಳು ನಿತ್ಯ ಬಸ್ಸಿಗೆ ಕಾಯ್ದು ಕಾಯ್ದು ಸೋತು ಹೋಗಿದ್ದಾರೆ.

ಕೇಳಿದ್ರಲ್ಲಾ, ಕಾಲಿಡಲು ಜಾಗವಿಲ್ಲದ ಬಸ್ ಒಳಗೆ ನೂಕಿಕೊಂಡು ಎಲ್ಲರೂ ಒಮ್ಮೇಲೆ ಹತ್ತಿ ಹೋಗ್ಬೇಕು. ಈ ಸಾರಿಗೆ ಬಸ್'ಗಳು ತಮ್ಮ ಸಾಮರ್ಥ್ಯ ಮೀರಿ ಪ್ರಯಾಣೀಕರನ್ನು ಸಾಗಿಸಿದ್ರೂ ಇನ್ನು ಎಷ್ಟೋ ವಿದ್ಯಾರ್ಥಿಗಳು ಬಸ್ ಹತ್ತಲಾಗದೆ ಬಸ್ ನಿಲ್ದಾಣದಲ್ಲೇ ಉಳಿದು ಬಿಡ್ತಾರೆ.

ಈಗಾಗಲೇ ಎಷ್ಟೋ ಮಕ್ಕಳು, ವೃದ್ಧರೂ ಬಸ್ ಏರಲಾಗದೆ ಕೆಳಗೆ ಬಿದ್ದ ಉದಾಹರಣೆ ಇದ್ದು ಈ ಬಗ್ಗೆ ಸಂಬಂಧಪಟ್ಟ ಮೇಲಾಕಾರಿಗಳು ಗಮನಿಸಿ ನಿತ್ಯ ಬೆಳಿಗ್ಗೆ ಸಾಯಂಕಾಲ ಅವಧಿಯಲ್ಲಾದರೂ ಸಾರಿಗೆ ಸೌಲಭ್ಯ ಹೆಚ್ಚಿಸಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

12/02/2021 04:19 pm

Cinque Terre

31.69 K

Cinque Terre

0

ಸಂಬಂಧಿತ ಸುದ್ದಿ