ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನಾಗರಿಕರ ಸಮ್ಮತಿ ಮೇರೆಗೆ ತಾತ್ಕಾಲಿಕವಾಗಿ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ

ನವಲಗುಂದ: ಪಟ್ಟಣದ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಗೆ ಸ್ಥಳಾಂತರಿಸಿರೋದು ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ ನವಲಗುಂದ ಪುರಸಭೆ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ, ಈ ನಿರ್ಣಯ ಎಲ್ಲರ ಸಮ್ಮತದ ಮೇರೆಗೆ ಮಾಡಲಾಗಿದ್ದು, ಇದು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೆಲಸವಾಗಿಲ್ಲಾ ಎಂದಿದ್ದಾರೆ.

ಹೌದು ಈ ಮಾರುಕಟ್ಟೆ ತೆರವು ಮಾಡಲು ಕಳೆದ ವರ್ಷ ಜುಲೈ 21 ಕ್ಕೆ ಸರ್ಕಾರದ ಆದೇಶ ಕೂಡ ಹೊರಡಿಸಲಾಗಿತ್ತು. ಅಷ್ಟೇ ಅಲ್ಲದೇ ಮಾರುಕಟ್ಟೆಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುತಾಗುತ್ತಿದೆ ಕೂಡಲೇ ಮಾರುಕಟ್ಟೆ ಸ್ಥಳಾಂತರಿಸಿ ಎಂದು ಹಲವು ಸಂಘಟನೆಗಳು ಮನವಿವನ್ನು ಸಹ ನೀಡಿದ್ದವು. ಇನ್ನು ಇದೇ ಜನವರಿ 22 ನೇ ತಾರೀಕಿನಂದು ಊರಿನ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮರುಕಟ್ಟೆ ಸ್ಥಳಾಂತರಿಸಲು ಮನವಿ ಪತ್ರವನ್ನು ಸಹ ನೀಡಿದ್ದರು. ಅಷ್ಟೇ ಅಲ್ಲದೇ ನಗರದ ಹಿರಿಯರು, ರಾಜ್ಯ ಬೀದಿ ಬದಿಯ ವ್ಯಾಪಾರಸ್ತರ ಪದಾಧಿಕಾರಿಗಳು, ತಹಸೀಲ್ದಾರ್, ಸಿಪಿಐ, ಪಿ ಎಸ್ ಐ, ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಕೂಡಿ ಸಭೆ ನಡೆಸಲಾಗಿತ್ತು, ಈ ಸಭೆಯಲ್ಲಿ ಗಾಂಧೀ ಮಾರುಕಟ್ಟೆ ಬಳಿ ಇರುವ ನೂತನ ಮಾರುಕಟ್ಟೆಯನ್ನು ಒಂದು ವರ್ಷದೊಳಗಾಗಿ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಲಾಗಿತ್ತು.

ಅಲ್ಲಿಯವರೆಗೆ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಯಲ್ಲಿಯೇ ನಡೆಸುವುದು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈಗ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಾವು ಸರ್ಕಾರದ ಆದೇಶದನ್ವಯ ಕೆಲಸ ಮಾಡುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ ತಿಳಿಸಿದರು.

Edited By : Nagaraj Tulugeri
Kshetra Samachara

Kshetra Samachara

12/02/2021 04:08 pm

Cinque Terre

16.42 K

Cinque Terre

0

ಸಂಬಂಧಿತ ಸುದ್ದಿ