ನವಲಗುಂದ : ಪಟ್ಟಣದ ಲಾಲಗುಡಿ ಮಾರುತಿ ದೇವಸ್ತಾನದ ಮುಂಭಾಗ ಗಟಾರ ವ್ಯವಸ್ಥೆ ಇಲ್ಲದೇ ನೀರು ರಾಷ್ಟೀಯ ಹೆದ್ದಾರಿಯ ರಸ್ತೆ ಮೇಲೆ ಹರಿಯುತ್ತಿದೆ, ಇದರಿಂದ ವಾಹನ ಸವಾರರ ಸಂಚಾರಕ್ಕೆ ಕಂಟಕವಾಗಿ ಕಾಡುತ್ತಿದೆ ಎಂದು ಈ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಇದಕ್ಕೆ ಫಲಶೃತಿ ಎಂಬಂತೆ ಈಗ ಆರ್ ಸಿ ಸಿ ಗಟಾರ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಹೌದು ಈ ಕಾಮಗಾರಿಗೆ ಕಳೆದ ತಿಂಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೂಮಿ ಪೂಜೆಯನ್ನು ಸಹ ನೆರವೇರಿಸಿದ್ದರು. ಇಷ್ಟು ದಿನಗಳಿಂದ ಇದ್ದ ಇಲ್ಲಿನ ಚರಂಡಿ ಸಮಸ್ಯೆಗೆ ಈಗ ಪರಿಹಾರ ದೊರಕ್ಕಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
Kshetra Samachara
10/02/2021 03:08 pm