ಕಲಘಟಗಿ:ಪಟ್ಟಣ ಪಂಚಾಯಿತಿ 2020-21ನೇ ಸಾಲಿನ ಎಸ್ಎಫ್ ಸಿ ಮುಕ್ತ ನಿಧಿ 24.10% ಯೋಜನೆಯ ಪರಿಶಿಷ್ಟ ಪಂಗಡ ಘಟಕದಡಿ15 ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸಲಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಅನಸೂಯಾ ಹೆಬ್ಬಳ್ಳಿಮಠ,ಉಪಾಧ್ಯಕ್ಷರಾದ ಯಲ್ಲವ್ವ ಶಿಗ್ಲಿ,ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೌಳಿ ಫಲಾನುಭವಿ ಬಾಳವ್ವ ಉಗ್ನಿಕೇರಿಗೆ ಸಿಲಿಂಡರ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ ಪಂ ಸದಸ್ಯರಾದ ಲಕ್ಷ್ಮಿ ಪಾಲ್ಕರ,ನಿಂಗಪ್ಪ ಹರಪನಹಳ್ಳಿ,ಕೃಷ್ಣ ಲಮಾಣಿ,ಬಸವರಾಜ ಕಡ್ಲಾಸ್ಕರ,ಕಲ್ಮೇಶ ಬೆಣ್ಣಿ, ಕೃಷ್ಣಾ ತಹಶೀಲ್ದಾರ, ಸುನೀಲ ಗಬ್ಬೂರ, ಮುಖ್ಯಾಧಿಕಾರಿ ಬಿ. ಚಂದ್ರಶೇಖರ,ವಿಷಯ ನಿರ್ವಾಹಕ ಶರಣಪ್ಪ ಉಣಕಲ್ಲ,ನಾಗರಾಜ ಚಿಕ್ಕಮಠ
ಉಪಸ್ಥಿತರಿದ್ದರು.
Kshetra Samachara
04/02/2021 06:08 pm