ಅಣ್ಣಿಗೇರಿ : ತಾಲೂಕಿನ ಇಂಬ್ರಾಹಿಂಪುರ ಗ್ರಾಮದ ತಾಲೂಕು ಪಂಚಾಯತಿ ಅನುದಾನದಲ್ಲಿ ಎಸ್ ಸಿ ಕಾಲೋನಿಯ ಕೆರೆ ಕೋಡಿಯಲ್ಲಿ ಹೈಮಾಕ್ಸ್ ದೀಪವನ್ನು ಅಳವಡಿಸಬೇಕಿತ್ತು, ಆದರೆ ಗುತ್ತಿಗೆದಾರರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ತಮಗೆ ಬೇಕಾದಲ್ಲಿ ಕಾಮಗಾರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹೈಮಾಕ್ಸ್ ದೀಪವನ್ನು ಕ್ರಿಯಾ ಯೋಜನೆಯಲ್ಲಿ ಇರುವ ಹಾಗೆ ಅದೇ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಇನ್ನು ಈ ವೇಳೆ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಗ್ರಾಮ ಸಂಚಾಲಕ ಧರ್ಮಣ್ಣ ದೊಡಮನಿ, ಶಿವರಾಜ ದೊಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
01/02/2021 07:31 pm