ಹುಬ್ಬಳ್ಳಿ : ಗಬ್ಬೂರು ಮಾರ್ಗದಿಂದ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಹುಬ್ಬಳ್ಳಿ ಸಿಟಿ ಸೇರಲು ಹೊರಟ ಆಂಬುಲೆನ್ಸ್ ಬಿಡನಾಳ ಕ್ರಾಸ್'ನಿಂದ ನ್ಯೂ ಇಂಗ್ಲಿಷ್ ಸ್ಕೂಲ್'ವರೆಗೆ ಏರ್ಪಟ್ಟ ಟ್ರಾಫಿಕ್ ಒಳಗೆ ಸಿಲುಕಿ ಬರೋಬ್ಬರಿ ನಾಲ್ಕು ನಿಮಿಷ ದಾರಿ ಕಾಣದೆ ತಟಸ್ಥವಾಗಿ ನಿಂತ ಪ್ರಸಂಗ ನಗರದ ಬಂಕಾಪೂರ ಚೌಕ ಬಳಿ ಇಂದು ಸಂಜೆ ನಡೆದಿದೆ.
ನಿತ್ಯ ಹುಬ್ಬಳ್ಳಿಯಿಂದ ಗಬ್ಬೂರು ಮಾರ್ಗವಾಗಿ ಹೊರಗೆ ಹೊರಡುವ ವಾಹನ ಮತ್ತು ನಗರ ಸೇರುವ ವಾಹನಗಳಿಂದ ಕಮರಿಪೇಟ್ ಪೊಲೀಸ್ ಠಾಣೆ ಮಾರ್ಗದಿಂದ ಬಿಡನಾಳ ಕ್ರಾಸ್ ವರೆಗೂ ನಿತ್ಯ ಟ್ರಾಫಿಕ್ ಜಾಮ್ ಕಿರಿ ಕಿರಿ ಉಂಟಾಗುತ್ತದೆ ಇಂದು ಸಂಜೆ ರೋಗಿಯನ್ನ ಸಾಗಿಸುವ ಆಂಬುಲೆನ್ಸ್ ಈ ಟ್ರಾಫಿಕ್ ಸಿಲುಕಿದೆ.
ಈಗಾಗಲೇ ವಿಸ್ತೀರ್ಣಗೊಂಡ ರಸ್ತೆಯಲ್ಲೇ ಈ ರೀತಿ ಸಮಸ್ಯೆ ಉಂಟಾಗುತ್ತಿರುವುದು ವಾಹನ ಸವಾರನ್ನು ಕಾಡುತ್ತಿದೆ.
Kshetra Samachara
30/01/2021 09:05 pm