ಹುಬ್ಬಳ್ಳಿ: ಅದು ವಾಣಿಜ್ಯನಗರಿಯ ಪ್ರತಿಷ್ಠಿತ ಡಿಜಿಟಲ್ ಗಾರ್ಡನ್.ಈಗ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಬೇಸರ ಮೂಡಿಸುತ್ತದೆ.ಹು-ಧಾ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಡಿಜಿಟಲ್ ಗಾರ್ಡನ್ ಈಗ ಪ್ರಾಬ್ಲಮ್ಸ್ ಗಾರ್ಡನ್ ಆಗಿದೆ.ಅಷ್ಟಕ್ಕೂ ಯಾವುದು ಆ ಗಾರ್ಡನ್ ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಎಲ್ಲೆಂದರಲ್ಲಿ ಹರಿದು ಬಿದ್ದಿರುವ ಕೇಬಲ್ ಕನೆಕ್ಷನ್.ಮೂಲೆಗುಂಪಾದ ವೈಫೈ ಬಾಕ್ಸ್ ಇದೆಲ್ಲದಕ್ಕೆ ಸಾಕ್ಷಿಯಾಗಿರುವುದು ಹುಬ್ಬಳ್ಳಿಯ ಕುಂಭಕೋಣಂ ಡಿಜಿಟಲ್ ಗಾರ್ಡನ್. ಹೌದು..ಹೆಸರಿಗೆ ಮಾತ್ರ ಡಿಜಿಟಲ್ ಗಾರ್ಡನ್ ಆಗಿರುವ ಹುಬ್ಬಳ್ಳಿಯ ಕುಂಭಕೋಣಂ ಪಾಲಿಕೆಯ ಗಾರ್ಡನ್ ಅವ್ಯವಸ್ಥೆ ಆಗರವಾಗಿದೆ. ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಕುಂಭಕೋಣಂ ಪ್ಲಾಟ್ ಬೈಲಪ್ಪನಗರದಲ್ಲಿ ಡಿಜಿಟಲ್ ಗಾರ್ಡನ ಮಾಡಲಾಗಿತ್ತು. ಈ ಒಂದು ಗಾರ್ಡನಲ್ಲಿ ವೈಫೈ, ಮೊಬೈಲ್ ಚಾರ್ಜರ್, ಇಂಟರ್ ನೆಟ್ ಸೌಲಭ್ಯ ನೀಡಲಾಗಿತ್ತು.ಅಲ್ಲದೇ ಇಲ್ಲಿ ಬರುವ ವಾಯುವಿಹಾರಿಗಳಿಗೆ ಡಿಜಿಟಲ್ ಸೇವೆಯನ್ನು ನೀಡಲಾಗುತ್ತಿತ್ತು. ಆದರೆ ಈಗ ಆ ಎಲ್ಲ ಸೌಲಭ್ಯಗಳು ನಿಂತಿವೆ.
ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸೋಲಾರ್ ವ್ಯವಸ್ಥೆ ಕೂಡ ಹಾಳಾಗಿದ್ದು,ಮೊಬೈಲ್ ಚಾರ್ಜಿಂಗ್, ವೈಫೈ, ಇಂಟರ್ನೆಟ್ ಸೌಲಭ್ಯ ಸ್ಥಗಿತಗೊಂಡಿದೆ.ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಡಿಜಿಟಲ್ ಗಾರ್ಡನ ಮಾಡಲಾಗಿತ್ತು.ಆದರೆ ನಿರ್ವಹಣೆ ಇಲ್ಲದೇ ಡಿಜಿಟಲ್ ಗಾರ್ಡನ್ ಈಗ ಪ್ರಾಬ್ಲಮ್ಸ್ ಗಾರ್ಡನ್ ಆಗಿದೆ.ಇಷ್ಟು ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಕೂಡ ಯಾವುದೇ ರೀತಿಯ ಕ್ರಮಗಳನ್ನು ಜರುಗಿಸದೇ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೇ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಅಗತ್ಯಕ್ಕೆ ಅನುಗುಣವಾಗಿ ಪಾಲಿಕೆಯಿಂದ ಡಿಜಿಟಲ್ ಗಾರ್ಡನ್ ನಿರ್ಮಾಣ ಮಾಡಿದೆ.ಆದ್ರೇ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿದ್ದು,ಅವ್ಯವಸ್ಥೆಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ.ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಂಡು ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
Kshetra Samachara
29/01/2021 06:48 pm