ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಸ್ತೆ ಕಾಮಗಾರಿ ನೆಪದಲ್ಲಿ ಧೂಳಿನ ಮಜ್ಜನ

ಕಲಘಟಗಿ: ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರ ಹಳಿಯಾಳ ರಸ್ತೆಯನ್ನು ಹಾಗೂ ಬಮ್ಮಿಗಟ್ಟಿ ಕ್ರಾಸ್ ಹತ್ತಿರ ಮೂಂಡಗೋಡ ರಸ್ತೆ ಅಗೆಯಲಾಗಿದ್ದು,ಪಟ್ಟಣದಲ್ಲಿ ಓಡಾಡುವ ಜನರಿಗೆ ನಿತ್ಯ ಧೂಳಿನ ಮಜ್ಜನ ಎನ್ನುವಂತಾಗಿದೆ.

ಪಟ್ಟಣದಿಂದ ಹಳಿಯಾಳ ಸಂಪರ್ಕಿಸುವ ರಸ್ತೆಯನ್ನು ಹನುಮಾನ ದೇವಸ್ಥಾನ,ಪಾಟೀಲ ಪಾರ್ಕ್ ಹತ್ತಿರ ಅಲ್ಲಲ್ಲಿ ಅಗೆಯಲಾಗಿದೆ ಹಾಗೂ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಹತ್ತಿರ ಮೂಂಡಗೋಡ ರಸ್ತೆಗಳನ್ನು ಅಭಿವೃದ್ಧಿ ಕಾಮಗಾರಿ ಮಾಡಲು ಅಗೆದು ಹಾಗೆ ಬಿಡಲಾಗಿದೆ.ಇದರಿಂದ ಕಳೆದ ಆರು ತಿಂಗಳಿನಿಂದ ಇಲ್ಲಿನ‌ ಅಂಗಡಿಕಾರರಿಗೆ,ಓಡಾಡುವ ಜನರಿಗೆ,ಶಾಲಾ ಮಕ್ಕಳಿಗೆ ಧೂಳಿನ ಮಜ್ಜನವಾಗುತ್ತಿದೆ.

ಇಲ್ಲಿ ಕಬ್ಬಿನ ಲಾರಿಗಳು,ಟ್ರ್ಯಾಕ್ಟರಗಳ ಹಾಗೂ ವಾಹನಗಳ ಓಡಾಟದಿಂದ ಧೂಳು ಹೆಚ್ಚಾಗಿದೆ.ರಸ್ತೆಯ ಧೂಳಿನಿಂದ ಶಾಲಾ ಮಕ್ಕಳು,ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ.

ಇನ್ನಾದರು ಸಂಬಂಧಪಟ್ಟ ಇಲಾಖೆ ಜನರು ಪ್ರತಿಭಟನೆ ಮಾಡುವ ಮುನ್ನ ರಸ್ತೆ ಸರಿಪಡಿಸಿ ಜನರಿಗೆ ಅನುಕೂಲ ಕಲ್ಪಿಸುವರೆ ಎಂಬುದನ್ನು ಕಾದು ನೋಡ ಬೇಕಿದೆ.

Edited By : Manjunath H D
Kshetra Samachara

Kshetra Samachara

29/01/2021 01:05 pm

Cinque Terre

24.04 K

Cinque Terre

0

ಸಂಬಂಧಿತ ಸುದ್ದಿ