ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜೀವ ಜಲ ಪೋಲು ಪಟ್ಟಣ ಪಂಚಾಯಿತಿಗೆ ಕೇಳೋರಾರು ?

ಕುಂದಗೋಳ : ಜೀವ ಜಲದ ರಕ್ಷಣೆಗಾಗಿ ಸರ್ಕಾರ ಯಾವುದೇ ಕ್ರಮ ರೂಪಿಸಲಿ, ಈ ನಿಯಮಗಳನ್ನು ಪಾಲನೆಗೆ ಬರುವುದು ಕಷ್ಟದ ಮಾತು. ಇದಕ್ಕೆ ಸಾಕ್ಷಿ ಎಂಬಂತೆ ಕುಂದಗೋಳ ಪಟ್ಟಣದ ಬಸ್ ನಿಲ್ದಾಣ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿನ ನೀರಿನ ಟ್ಯಾಂಕ್ ತುಂಬಿ ನೀರು ಹರಿದು ಚರಂಡಿ ಪೋಲಾಗುತ್ತಿದ್ದರು ವಾಟರಮನ್ ಸಿಬ್ಬಂದಿಗಳು ಈ ಬಗ್ಗೆ ಗಮನಿಸಿಲ್ಲ.

ದಾರಿಹೋಕರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಾ, ಜೀವ ಜಲ ಚರಂಡಿಗೆ ಪೋಲಾಗುವುದನ್ನು ನೋಡುತ್ತಾ ಮುಂದೆ ಸಾಗುವ ಸ್ಥಿತಿ ಸಾಮಾನ್ಯವಾಗಿತ್ತು. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟವರು ಗಮನಿಸಿ ನೀರಿನ ರಕ್ಷಣೆಗೆ ಮುಂದಾದ್ರೇ ಒಳಿತು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

Edited By : Nagesh Gaonkar
Kshetra Samachara

Kshetra Samachara

22/01/2021 12:57 pm

Cinque Terre

31.08 K

Cinque Terre

0

ಸಂಬಂಧಿತ ಸುದ್ದಿ