ಹುಬ್ಬಳ್ಳಿ:ಶಹರದಲ್ಲಿ ದಾಖಲಾತಿಗಳನ್ನು ಹೊಂದದೇ ವಾಹನ ಚಲಾಯಿಸುತ್ತಿರುವ ವೇಳೆ ವಶಪಡಿಸಿಕೊಂಡ ಆಟೋ, ರಿಕ್ಷಾ, ಗೂಡ್ಸ ಆಟೋ , ಮೋಟಾರ್ ಸೈಕಲ್ ಇತರೆ ಹಲವಾರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಗಬ್ಬೂರ ಕಛೇರಿಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಹನ ತಪಾಸಣೆ ಕಾಲಕ್ಕೆ ಮಾಲೀಕರುಗಳಿಗೆ ನೋಟಿಸು ಮುಖಾಂತರ ದಾಖಲಾತಿ ಹಾಜರುಪಡಿಸಿ ತೆಗೆದುಕೊಂಡು ಹೋಗುವಂತೆ ನೋಟಿಸು ಜಾರಿ ಮಾಡಿದ್ದರೂ ಕೂಡಾ ಈ ವರೆಗೂ ಒಟ್ಟು 34 ವಾಹನಗಳ ಮಾಲೀಕರು ಅಥವಾ ಅವುಗಳಿಗೆ ಸಂಬಂಧಿಸಿದವರು ವಾಹನಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ.
15 ದಿವಸದ ಒಳಗಾಗಿ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಂಬಂಧಿಸಿದವರು ಹಾಜರಾಗಿ ದಾಖಲಾತಿಗಳನ್ನು ನೀಡಿ , ಬಿಡುಗಡೆ ಮಾಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲತ್ವಾಡಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
21/01/2021 12:38 pm