ಹುಬ್ಬಳ್ಳಿ- ಕುಡಿಯುವ ನೀರಿಗಾಗಿ ಪರದಾಡುವ ಸಂದರ್ಭದಲ್ಲಿ, ಯುಜಿಡಿಯ ಕಳಪೆ ಕಾಮಗಾರಿಯಿಂದ ಕುಡಿಯುವ ನೀರು ಪೋಲಾಗುತ್ತಿರುವ ಘಟನೆ ನಗರದ ಮ್ಯಾದಾರ ಓಣಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ, ಜೆಸಿಬಿಯಿಂದ ಪಾಲಿಕೆ ಸಿಬ್ಬಂದಿ ರಸ್ತೆ ಪಕ್ಕ ಅಗೆಯುವ ಸಂದರ್ಭದಲ್ಲಿ, ಒಳಗಡೆ ಇದ್ದ ನೀರಿನ ಪೈಪ್ ಲೈನ್ ಒಡೆದುಹೋಗಿದ್ದು ನೀರು ಪೋಲು ಆಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಎಂಟು ದಿನಗಳಿಗೊಮ್ಮೆ ನೀರು ಬರುತ್ತಿದ್ದು ಇಂತಹ ಸಂದರ್ಭದಲ್ಲಿ ನೀರು ಇಲ್ಲದೇ ಪರದಾಟ ನಡೆಸಬೇಕಾಗುತ್ತೆ,ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು, ಪೈಪ್ ಲೈನ್ ಒಳಗಿನ ನೀರಿನ ಒತ್ತಡಕ್ಕೆ ಕಾರಂಜಿಯಂತೆ ನೀರು ಆಕಾಶಕ್ಕೆ ಚಿಮ್ಮುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನುಮುಂದೆಯಾದರು ಕಾಮಗಾರಿ ಮಾಡುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಬೇಕೆಂದು ಜನರ ಒತ್ತಾಯವಾಗಿದೆ.!
Kshetra Samachara
21/01/2021 10:32 am