ಕುಂದಗೋಳ : ಮಳೆಗಾಲ ಬಂತೆಂದರೇ ಸಾಕು ಅಂಗೈಯಲ್ಲಿ ಜೀವ ಹಿಡಿದು ಸಾಗ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಕುಂದಗೋಳ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಳಾದ ರಸ್ತೆಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ.
ಈ ಹಿಂದೆ ಅತಿವೃಷ್ಟಿ ಪರಿಣಾಮ ರಸ್ತೆಯುದ್ದಕ್ಕೂ ತಗ್ಗು, ಗುಂಡಿ ಬಿದ್ದು ನಿತ್ಯ ರೈತಾಪಿ ಕಾಯಕ್ಕೆ ತೊಂದರೆ ಉಂಟಾಗಿ ಟ್ರ್ಯಾಕ್ಟರ್, ಎತ್ತು, ಚಕ್ಕಡಿಗಳು ಸಹ ಸಂಚರಿಸಲಾಗದ ಸ್ಥಿತಿಯಲ್ಲಿದ್ದ ಈ ರಸ್ತೆಯ ದುಸ್ಥಿತಿ, ಹಾಗೂ ರೈತರ ಪರಿಸ್ಥಿತಿಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ಸದ್ಯ ಈ ಬಗ್ಗೆ ಶಾಸಕಿ ಕುಸುಮಾವತಿ ಕ್ರಮ ಕೈಗೊಂಡು ತಾವೇ ಮುತುವರ್ಜಿ ವಹಿಸಿ 5 ಕಿ.ಮೀ ರಸ್ತೆ ಕಾಮಗಾರಿಗೆ ಸೂಚಿಸಿದ್ದು ,ಈಗಾಗಲೇ ಮೆಟಲಿಂಗ್ ಕಾರ್ಯ ನಡೆದಿದೆ.
ಕೆಂಪು ಗೋರಚು ಮಣ್ಣು ಹಾಕಿ 70 ಮೀಟರ್ ಅಗಲದ 5 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಈ ಬಗ್ಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
Kshetra Samachara
19/01/2021 02:44 pm