ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಬ್ಲಿಕ್ ‌ನೆಕ್ಸ್ಟ್ ಇಂಪ್ಯಾಕ್ಟ್: ಡಿಪೋ ಲೋಕಾರ್ಪಣೆಗೆ ದಿನಾಂಕ ನಿಗದಿ

ಕಲಘಟಗಿ: ಪಟ್ಟಣದಲ್ಲಿನ ಬಸ್ ಘಟಕದ ಲೋಕಾರ್ಪಣೆ ‌ಯಾವಾಗ? ಎಂದು ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜನವರಿ 23 ರಂದು ಡಿಪೋ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಪಬ್ಲಿಕ್ ನೆಕ್ಸ್ಟ್ ಡಿಪೋ ಉದ್ಘಾಟನೆಯ ವಿಳಂಬದ ಕುರಿತು ಸವಿವರವಾದ ವರದಿ ಪ್ರಕಟಿಸಿತ್ತು.

ಕಲಘಟಗಿ ಜನತೆಯ ಬಹು ದಿನಗಳ ಬೇಡಿಕೆಯಾಗಿರುವ,ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ (ಡಿಪೋ) ಘಟಕದ ನಿರ್ಮಾಣ ಕಾರ್ಯ ‌ಪೂರ್ಣಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಜಾಗೆಯಲ್ಲಿ ಅಂದಾಜು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಬಸ್ ಘಟಕ ಸಿದ್ಧವಾಗಿದೆ.

ಬಸ್ ಘಟಕ (ಡಿಪೋ) ಪ್ರಾರಂಭವಾದರೆ, ತಾಲೂಕಿನ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ನೀಗಲಿದೆ. ಕೊರೊನಾ ಹಾಗೂ‌ ಲಾಕ್ ಡೌನ್ ಕಾರಣ ನೂತನ ಘಟಕದ ಉದ್ಘಾಟನೆ ವಿಳಂಬವಾಗಿತ್ತು.

Edited By : Nagesh Gaonkar
Kshetra Samachara

Kshetra Samachara

18/01/2021 03:24 pm

Cinque Terre

28.65 K

Cinque Terre

4

ಸಂಬಂಧಿತ ಸುದ್ದಿ