ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು 5 ದಿನ ಸಂಚಾರ

ಧಾರವಾಡ: ಭಾರತೀಯ ರೈಲ್ವೆ ಇಲಾಖೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ ನೀಡಿದೆ. ಯಶವಂತಪುರ ಹಜರತ್​ ನಿಜಾಮುದ್ದೀನ್​ ರೈಲು ಇನ್ನು ಮುಂದೆ ವಾರದಲ್ಲಿ 5 ದಿನ ಸಂಚಾರ ನಡೆಸಲಿದೆ.

ಯಶವಂತಪುರ-ಹಜರತ್‌ ನಿಜಾಮುದ್ದೀನ್-ಯಶವಂತಪುರ ನಡುವೆ ಸಂಚರಿಸುವ ಸಂಪರ್ಕ ಕ್ರಾಂತಿ ಸೂಪರ್ ಫಾಸ್ಟ್ ಪ್ಯಾಸೆಂಜರ್‌ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರದಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.

ಈ ರೈಲು ಸಂಚಾರದಿಂದ ಗದಗ, ಕೊಪ್ಪಳ, ಬಳ್ಳಾರಿ, ಧಾರವಾಡ ಭಾಗದ ಜನರಿಗೆ ಅನುಕೂಲವಾಗಲಿದೆ. ಈಗ ರೈಲು ಹುಬ್ಬಳ್ಳಿ, ಬಳ್ಳಾರಿ, ಪೆಡೆಕಲ್ಲು ಮೂಲಕ ಸಂಚಾರ ನಡೆಸಲಿದೆ. ಇದರಿಂದಾಗಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆ ಸಂಚಾರ ನಡೆಸುವ ಜನರಿಗೆ ಉಪಯೋಗವಾಗಲಿದೆ.

Edited By : Nagaraj Tulugeri
Kshetra Samachara

Kshetra Samachara

13/01/2021 07:08 pm

Cinque Terre

17.17 K

Cinque Terre

0

ಸಂಬಂಧಿತ ಸುದ್ದಿ