ಹುಬ್ಬಳ್ಳಿ:ಹು-ಧಾ ಮಹಾನಗರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿ ತನ್ನ ಕಾರ್ಯವೈಕರಿಯನ್ನು ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು,ಅಂತೂ ಇಂತೂ ಹುಬ್ಬಳ್ಳಿ ನಗರ ಸ್ಮಾರ್ಟ್ ಸಿಟಿಯಾಗುವ ಕನಸು ಸನಿಹವಾಗುತ್ತಿದೆ.
ಹೌದು..ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂ.ಟಿ ಸಾಗರ್ ಇಂಡಸ್ಟ್ರಿಯಲ್ ಎಸ್ಟೇಟ್, ಗೋಕುಲ್ ರಸ್ತೆಯಲ್ಲಿ ಸುಮಾರು 4.2 ಕಿ.ಮೀ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳಿಗೆ ನವೀಕರಿಸಿದ್ದು,ಈಗ ರಸ್ತೆ ಉತ್ತಮವಾಗಿ ಹಾಗೂ ಸ್ವಚ್ಛಂದವಾಗಿ ಗೋಚರಿಸುತ್ತಿದೆ.
ಭೂಗತ ಕೇಬಲಿಂಗ್ ಗಾಗಿ ಒದಗಿಸಲಾಗಿದ್ದ ಹೋಲ್ ಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು,ಈಗ ಎಂ.ಟಿ ಸಾಗರ ಇಂಡಸ್ಟ್ರಿಯಲ್ ಎಸ್ಟೇಟ್ ಸುಂದರ ವಠಾರದಂತೆ ಕಂಗೊಳಿಸುತ್ತಿದ್ದು,ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
12/01/2021 03:38 pm