ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾಣೆಯಾದ ಸ್ವಚ್ಛತೆ, ಪುಂಡರ ಅಡ್ಡೆಯಾದ ನವಲಗುಂದದ ಮಹಾತ್ಮ ಗಾಂಧೀಜಿ ವಾಣಿಜ್ಯ ಸಂಕಿರ್ಣ ಕಟ್ಟಡ

ನವಲಗುಂದ : ನವಲಗುಂದದ ಮಹಾತ್ಮ ಗಾಂಧೀಜಿ ವಾಣಿಜ್ಯ ಸಂಕಿರ್ಣ ಕಟ್ಟಡ ಇದು, ಹೊರಗಿನಿಂದ ನೋಡಲು ಅತ್ಯಂತ ಅಚ್ಚುಕಟ್ಟಾಗಿ ಕಾಣುವ ಈ ಕಟ್ಟಡದ ದುಸ್ಥಿಯನ್ನು ನಾವು ನಿಮಗೆ ತೋರಿಸ್ತೀವಿ ಬನ್ನಿ.

ನವಲಗುಂದ ಪುರಸಭೆಯ ಅಧಿನದಲ್ಲಿರುವ ಈ ಕಟ್ಟಡದಲ್ಲಿ ಸಾಕಷ್ಟು ಮಳೆಗೆಗಳಿವೆ, ಆದರೆ ಶೌಚಾಲಯದ ಸೌಲಭ್ಯ ಇಲ್ಲಾ, ಇದರಿಂದ ಕಟ್ಟಡದ ಮೇಲ್ಬಾಗದಲ್ಲಿ ಕೇವಲ ಮಲ,ಮೂತ್ರ ವಿಸರ್ಜನೆ ಮಾಡಿ ಸಂಪೂರ್ಣ ಕೊಳಚೆಯಾಗಿ ಮಾಡಲಾಗಿದೆ.

ಅಷ್ಟೇ ಅಲ್ಲಾ ಇಲ್ಲಿ ರಾತ್ರಿ ವೇಳೆಗೆ ಸಿಗರೇಟ್, ಮದ್ಯಪಾನದ ಚಟುವಟಿಕೆಗಳು ಜೋರಾಗಿಯೇ ನಡೀತಿರುತ್ತಂತೆ ಅದಕ್ಕೆ ಸಾಕ್ಷಿ ಇಲ್ಲಿ ಕಾಣುತ್ತಿರುವ ಸೇದು ಬಿಸಾಡಿದ ಸಿಗರೇಟ್ ಮತ್ತು ಕುಡಿದು ಎಸೆದ ಮದ್ಯಪಾನದ ಬಾಟಲ್ ಗಳು ಇಷ್ಟೆಲ್ಲಾ ಗಲೀಜಾಗಿ ಕೂಡಿರುವ ಈ ಸ್ಥಳದತ್ತ ಸಂಬಂಧ ಪಟ್ಟ ಯಾವ ಅಧಿಕಾರಿಗಳು ಸಹ ಗಮನ ಹರಿಸಿಲ್ಲಾ, ಇದ್ದ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಿ, ಪುಂಡರಿಗೆ ಇಲ್ಲಿ ಅವಕಾಶ ನೀಡದಂತೆ ಸೂಕ್ತ ನಿರ್ವಹಣೆ ಮಾಡಬೇಕಿದೆ.

Edited By :
Kshetra Samachara

Kshetra Samachara

11/01/2021 07:11 pm

Cinque Terre

42.89 K

Cinque Terre

3

ಸಂಬಂಧಿತ ಸುದ್ದಿ