ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಹೇಗೆ ನಡೆಯುತ್ತಿದೆ ಅಂದ್ರೆ 'ನಂದು ಅಲ್ಲ ನಿಂದು ಅಲ್ಲ, ಜನರ ದುಡ್ಡನಲ್ಲಿ ಕಟ್ಟಿ ನೋಡು, ಕೆಡವಿ ನೋಡು' ಎನ್ನುವಂತಿದೆ.
ಕೆಲ ದಿನಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಚರಂಡಿಯನ್ನು ಒಡೆದು ಹಾಕಿ ಕಾಟಾಚಾರಕ್ಕೆ ಎನ್ನುವಂತೆ ಅಗಲೀಕರಣ ನಡೆಸಲಾಗಿದೆ. ಇದು ಒಂದು ರೀತಿ ಸ್ಮಾರ್ಟ್ ಗೋಲ್‌ಮಾಲ್ ಆಗಿದೆ. ವಿಕ್ಟೋರಿಯಾ ರಸ್ತೆ ಬದಿಯ ಚರಂಡಿ ಮತ್ತಷ್ಟು ಅಗಲವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಇದರಿಂದಾಗಿ ಹಳೇ ಚರಂಡಿಯ ಮೇಲೆ ಸ್ವಲ್ಪ ಒಡೆದು ಮೇಲೆ 3 ಇಂಚು ಜಾಸ್ತಿ ಮಾಡಿ ಸ್ಲ್ಯಾಬ್ ಹಾಕಲಾಗುತ್ತಿದೆ.
ಸಿಬಿಟಿ, ಸ್ಟೇಷನ್ ರೋಡ್‌ನಲ್ಲಿ ಹಳೇ ಚರಂಡಿಯನ್ನು ಸಂಪೂರ್ಣ ತೆಗೆದು ಹೊಸ ಚರಂಡಿ ನಿರ್ಮಿಸಿದ್ದಾರೆ. ಆದರೆ ಈಗ ಅದನ್ನು ಒಡೆದು ಹಾಕಿ ಅಗಲ ಮಾಡಿದ್ದೇವೆ ಎನ್ನುವಂತೆ ಕಾಣಲು ಸ್ಲ್ಯಾಬ್ ಹಾಕಲಾಗುತ್ತಿದೆ. ಇದರಿಂದಾಗಿ ಕೇವಲ ಹತ್ತು ನಿಮಿಷ ಜೋರು ಮಳೆಯಾದರೆ ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
Kshetra Samachara
11/01/2021 05:30 pm