ಹುಬ್ಬಳ್ಳಿ: ಇಲ್ಲಿನ ಜಗದೀಶ ನಗರದ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ, ಹಕ್ಕು ಪತ್ರ, ಸಾಲಮನ್ನಾ ಪತ್ರಗಳನ್ನು, ನೋಂದಣಿ ಮಾಡಿಕೊಡಬೇಕೆಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ಪ್ರತಿಭಟನೆ ನಡೆಸಿದರು.
ನಂತರ ಬಂದ ವಸತಿ ಸಚಿವ ವಿ.ಸೋಮಣ್ಣ ಎಲ್ಲ ಫಲಾನುಭವಿಗಳ ಒಂದು ಲಿಸ್ಟ್ ಮಾಡಿ ನಾಳೆ ಬಂದು ಭೇಟಿಯಾಗಿ ಪಾಲಿಕೆ ಕಮಿಷನರ್ ಅನ್ನು ಕರೆಸಿಕೊಂಡು ಎಲ್ಲ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ತಿಳಿಸಿದರು.
Kshetra Samachara
11/01/2021 12:32 pm