ನವಲಗುಂದ : ನವಲಗುಂದ ಪಟ್ಟಣದ ಅಣ್ಣಿಗೇರಿ ಕ್ರಾಸ್ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕದ ವ್ಯರ್ಥ ನೀರು ರಸ್ತೆ ಮೇಲೆ ಹರಿಯುತ್ತಿದೆ ಅಂತಾ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಬಿತ್ತರಿಸಿತ್ತು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ನೀರು ಚರಂಡಿ ಸೇರಲು ಈಗ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಮುಂದಾಗಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕದಿಂದ ಹರಿಯುವ ವ್ಯರ್ಥ ನೀರು ರಸ್ತೆ ಮೇಲೆಯೇ ಹರಿಯುತ್ತಿತ್ತು, ಇದರಿಂದ ವಾಹನ ಸವಾರರು ಅಪಾಯದ ಆತಂಕದಲ್ಲಿ ಸಂಚಾರ ನಡೆಸುತ್ತಿದ್ರು, ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕಳೆದ ಎರಡು ದಿನಗಳ ಹಿಂದೆ ವರದಿಯನ್ನು ಬಿತ್ತರಿಸಿ, ಅಧಿಕಾರಿಗಳ ಗಮನಕ್ಕೆ ತಂದಿತ್ತು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಇಂದು ನೀರು ಚರಂಡಿ ಸೇರಲು ಪೈಪ್ ಅಳವಡಿಸಲು ಮುಂದಾಗಿದ್ದಾರೆ. ಇದರಿಂದ ವಾಹನ ಸವಾರರಿಗೆ ನಿಶ್ಚಿಂತೆಯಿಂದ ಸಂಚರಿಸಲು ಅನುವುಮಾಡಿ ಕೊಟ್ಟಿದ್ದಾರೆ.
Kshetra Samachara
11/01/2021 12:07 pm