ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಈಗಾಗಲೇ ದೇಶದ ವಿವಿಧ ಭಾಗಗಳಿಗೆ ವಿಮಾನಯಾನ ಸೇವೆ ಆರಂಭವಾಗಿದೆ. ಉತ್ತಮ ದರ್ಜೆಯ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರೊಟ್ಟಿಗೆ ಇದೇ ಜನವರಿ 21ರಿಂದ ಹುಬ್ಬಳ್ಳಿಯಿಂದ ಕೊಚ್ಚಿ ಹಾಗೂ ಗೋವಾಕ್ಕೆ ನೇರ ವಿಮಾನ ಸೌಲಭ್ಯ ಆರಂಭವಾಗಲಿದೆ.
ಹೊಸ ವಿಮಾನ ಸಂಪರ್ಕ: ಇದೇ ಜನವರಿ 21ರಿಂದ ಹುಬ್ಬಳ್ಳಿಯಿಂದ ಕೊಚ್ಚಿ ಹಾಗೂ ಗೋವಾಕ್ಕೆ ನೇರ ವಿಮಾನ ಸೌಲಭ್ಯ ಆರಂಭವಾಗಲಿದೆ. ಇಂಡಿಗೋ ಸಂಸ್ಥೆ ಹುಬ್ಬಳ್ಳಿಯಿಂದ ಮತ್ತೆರೆಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಇಂಡಿಗೋ ಸಂಸ್ಥೆ ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ ಸೇವೆಯನ್ನು ಜ. 21 ರಿಂದ ಪುನರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಫೇಸ್ಬುಕ್ ಖಾತೆ ಮೂಲಕ ತಿಳಿಸಿದ್ದಾರೆ.
ರಾತ್ರಿ 1.00ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಮುಂಜಾನೆ 3.10ಕ್ಕೆ ಕೊಚ್ಚಿ ತಲುಪಲಿದೆ. 3.45 ಕ್ಕೆ ಕೊಚ್ಚಿಯಿಂದ ಹೊರಟು 5.30ಕ್ಕೆ ಹುಬ್ಬಳ್ಳಿ ತಲುಪುವುದು. 6.00ಕ್ಕೆ ಹುಬ್ಬಳ್ಳಿಯಿಂದ ಹೊರಟು 7.00ಕ್ಕೆ ಗೋವಾ ತಲುಪುವುದು. 7.30ಕ್ಕೆ ಗೋವಾದಿಂದ ಹೊರಟು 8.30 ಕ್ಕೆ ಹುಬ್ಬಳ್ಳಿ ತಲುಪಲಿದೆ.
Kshetra Samachara
10/01/2021 07:35 pm