ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪ್ರಾಥಮಿಕ ಚಿಕಿತ್ಸಾ ಕಿಟ್ ಗಳನ್ನೆ ತಿಂದು ಹಾಕುತ್ತಿದ್ದಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು, ಇನ್ನು ಗಾಯಾಳುಗಳ ಸ್ಥಿತಿ ದೇವರಿಗೆ ಪ್ರೀತಿ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ : ಸಾರ್ವಜನಿಕ ಸಂಚಾರ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯ ಮಾಡಲಾಗಿದೆ. ಇದನ್ನು ಪಾಲಿಸಬೇಕಾದ ಸಾರಿಗೆ ಇಲಾಖೆ ಮಾತ್ರ ಕೇಂದ್ರ ಮೋಟಾರು ವಾಹನ ಕಾಯ್ದೆ ಯನ್ನು ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಾಗೂ ನಗರ ಸಾರಿಗೆ ಸೇರಿದ ಯಾವುದೇ ಬಸ್ ಗಳಲ್ಲಿ ಈ ಕಿಟ್ ಕಾಣಸಿಗುವದಿಲ್ಲ. ಬಸ್ ನಲ್ಲಿ ಸಂಚರಿಸುವಾಗ ಯಾವುದಾದರೂ ಅಪಘಾತ ಹಾಗೂ ಅವಘಡವಾದ್ರೆ, ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ಬೇಕು.

ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸುವವರೆಗೆ ಗಾಯಾಳು ಪ್ರಾಣ ಉಳಿಸುವ ಉದ್ದೇಶದಿಂದ ಈ ಕಿಟ್ ಅವಶ್ಯವಾಗಿದೆ. ಆದ್ರೆ ಇಲ್ಲಿ ಮಾತ್ರ ಎಲ್ಲಾ ತದ್ವಿರುದ್ದವಾಗಿದೆ. ಡೆಟಾಲ್, ಡ್ರೆಸಿಂಗ್ ಬಟ್ಟೆ, ಗಾಯದ ಮುಲಾಮು ಇಡುವ ಡಬ್ಬಿಗಳೇ ಮಾಯವಾಗಿವೆ. ಆಕಸ್ಮಿಕವಾಗಿ ಅಪಘಾತ ಸಂಭವಿಸಿದ್ರೆ ಆ ಪ್ರಯಾಣಿಕನಿಗೆ ಪ್ರಥಮ ಚಿಕಿತ್ಸೆಯಿಂದ ವಂಚಿತನಾಗಿ ಪ್ರಾಣ ಹಾನಿ ಸಂಭವಿಸಬಹುದಾಗಿದೆ.

ಸಾಮಾನ್ಯವಾಗಿ ಎಲ್ಲಾ ಸಾರಿಗೆ ಬಸ್ ಗಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಈ ಬಗ್ಗೆ ಕೆಲ ವಾಹನ ಚಾಲಕರು ಹಾಗೂ ನಿರ್ವಾಹಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರೆ, ಉನ್ನತ ಅಧಿಕಾರಿಗಳು ಕೂಡ ಮಾಧ್ಯಮಕ್ಕೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಒಂದು ಮೂಲಗಳ ಪ್ರಕಾರ ಪ್ರತಿ ವರ್ಷ ಈ ಫಸ್ಟ್ ಏಡ್ ಕಿಟ್ ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದ್ರೆ ಯಾವ ಬಸ್ ಗಳಲ್ಲಿಯೂ ಒಂದು ಡೆಟಾಲ್ ಕೂಡ ಕಾಣಿಸಿವದಿಲ್ಲ. ಅದು ಎಲ್ಲಿಗೆ ಹೋಗುತ್ತೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ.

ಇದರ ಹಿಂದೆ ಅಕ್ರಮದ ವಾಸನೆ ಬಡಿಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಡಿವಾಣ ಹಾಕಿ ಸಾರ್ವಜನಿಕ ಬಸ್ ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ ಇಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ....!

Edited By : Manjunath H D
Kshetra Samachara

Kshetra Samachara

09/01/2021 12:38 pm

Cinque Terre

33.74 K

Cinque Terre

2

ಸಂಬಂಧಿತ ಸುದ್ದಿ