ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಇದ್ದು ಇಲ್ಲದಂತಾದ ಸಾರ್ವಜನಿಕ ನೀರಿನ ಟ್ಯಾಂಕ್, ತಾಂಡವ ಆಡುತ್ತಿರುವ ಕೊಳಚೆ

ನವಲಗುಂದ : ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಇರುವ ಸಾರ್ವಜನಿಕ ನೀರಿನ ಟ್ಯಾಂಕ್ ನ ದುರಾವಸ್ಥೆ ಇದು, ನೀರಿನ ಟ್ಯಾಂಕ್ ಬಂದ್ ಆಗಿದ್ದು, ಟ್ಯಾಂಕ್ ನ ಸುತ್ತ ಕೊಳಚೆ ತಾಂಡವ ಆಡುತ್ತಿದೆ.

ಹೌದು ತಾಲೂಕಿನ ಗುಡಿಸಾಗರ ಗ್ರಾಮದಲ್ಲಿರುವ ಬಹುತೇಕ ಸಾರ್ವಜನಿಕ ನೀರಿನ ಟ್ಯಾಂಕ್ ಪರಿಸ್ಥಿತಿ ಇದೆ ರೀತಿ ಇವೆ. ಟ್ಯಾಂಕ್ ಇದ್ದು ನೀರು ಬರದ ಪರಿಸ್ಥಿತಿ ಕೆಲವೆಡೆ ಇದ್ರೆ, ನೀರು ಬಂದ್ರು ಅದನ್ನ ಬಂದ್ ಮಾಡಿದ್ದು ಉಂಟು,

ಇನ್ನು ಈ ಸಾರ್ವಜನಿಕ ನೀರಿನ ಟ್ಯಾಂಕ್ ನ ಸುತ್ತ ಎಷ್ಟು ಕೊಳಚೆ ಅಂದ್ರೆ ಅಲ್ಲಿನ ಸ್ಥಳೀಯ ನಿವಾಸಿಗಳ ಪಾಡು ಹೇಳತೀರದ್ದು, ಹಂದಿಗಳ ಹಿಂಡು ಅಲ್ಲೇ ಇರುತ್ತೆ ಇದರಿಂದ ಸಾಂಕ್ರಾಮಿಕ ರೋಗದ ಭಯ ಕೂಡ ಕಾಡದೆ ಇರದು, ಸಾರ್ವಜನಿಕ ನೀರಿನ ಟ್ಯಾಂಕ್ ನ ಅವಶ್ಯಕತೆ ಇರದೇ ಹೋದ್ರೂ ಪರವಾಗಿಲ್ಲ ಆದ್ರೆ ಸ್ವಚ್ಛತೆ ಕಡೆ ಆದ್ರೂ ಗಮನಹರಿಸ ಬೇಕಲ್ಲವೇ.

Edited By : Manjunath H D
Kshetra Samachara

Kshetra Samachara

08/01/2021 04:05 pm

Cinque Terre

37.26 K

Cinque Terre

1

ಸಂಬಂಧಿತ ಸುದ್ದಿ