ಕುಂದಗೋಳ : ಹೊಸಳ್ಳಿ ಮಾರ್ಗವಾಗಿ ಸೂಕ್ತ ಸಾರಿಗೆ ವ್ಯವಸ್ಥೆಗೆ ಆಗ್ರಹಿಸಿ ಬುಧವಾರ ವಿದ್ಯಾರ್ಥಿನಿಯರು ಬಸ್ ತಡೆ ನಡೆಸಿದ ಹಿನ್ನೆಲೆಯಲ್ಲಿ ಇಂದು ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪರಿಶೀಲನೆ ನಡೆಸಿದರು.
ಬಳಿಕ ಹೊಸಳ್ಳಿ ಯರೇಬೂದಿಹಾಳ ಬಸ್ ಸಂಚಾರ ಆರಂಭಿಸಲು ಅಧಿಕಾರಿಗಳು ಸಮ್ಮತಿ ನೀಡಿದರು. ನಾಳೆ ಜ.8ರಿಂದ ಹುಬ್ಬಳ್ಳಿ-ಗುಂಜಳ ಎಲ್ಲಾ ಬಸ್ಸುಗಳನ್ನು ಹೊಸಳ್ಳಿ ಮಾರ್ಗವಾಗಿ ಓಡಿಸಲು ಸಾರಿಗೆ ಇಲಾಖೆ ಹಸಿರು ನಿಶಾನೆ ತೋರಿಸಿದ್ದಾರೆ. ಒಟ್ಟಾರೆ ವಿಧ್ಯಾರ್ಥಿನಿಯರ ಪ್ರತಿಭಟನೆಗೆ ಜಯ ಸಿಕ್ಕಿದ್ದು ಗ್ರಾಮೀಣ ಮಕ್ಕಳ ಓದಿಗೆ ಅನುಕೂಲವಾದಂತಾಗಿದೆ.
Kshetra Samachara
07/01/2021 09:24 pm