ಕಲಘಟಗಿ ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿದ್ಯುತ್ ದೀಪದ ಕಂಬ ಉರುಳಿ ಬಿದ್ದರೂ ಸರಿಪಡಿಸದೇ ಹಾಗೆ ಬಿಡಲಾಗಿದೆ.
ಪಟ್ಟಣದಲ್ಲಿನ ಚತುಷ್ಪಥ ಕಾಂಕ್ರೀಟ್ ರಸ್ತೆಯಲ್ಲಿನ ವಿದ್ಯುತ್ ಕಂಬ, ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಲಿದೆ.
ಎರಡು ದಿನಗಳಾದರು ದೀಪದ ಕಂಬ ಸರಿಪಡಿಸದೇ ವಾಲಿದ ಸ್ಥಿತಿಯಲ್ಲಿಯೇ ಹಾಗೆ ಬಿಡಲಾಗಿದೆ.
ರಸ್ತೆಯಲ್ಲಿ ವಾಲಿದ ಸ್ಥಿತಿಯಲ್ಲಿ ಇರುವ ಕಂಬವನ್ನು ಶೀಘ್ರ ತೆರವುಗೊಳಿಸಿ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿ ಎಂದು ಜನಸಾಮಾನ್ಯರು ಒತ್ತಾಯಿಸಿದ್ದಾರೆ.
Kshetra Samachara
07/01/2021 02:15 pm