ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಟ್ರಾಫಿಕ್ ಜಾಮ್ ನಿಂದಾಗಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು

ನವಲಗುಂದ : ನವಲಗುಂದ ಪಟ್ಟಣದಲ್ಲಿ ಇಂದು ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ಕಿಲೋಮೀಟರ್ ವರೆಗೆ ನಿಂತಿರುವ ದೃಶ್ಯಗಳು ಕಂಡು ಬಂದವು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಒಮ್ಮೆ ಏನಾದರೂ ಟ್ರಾಫಿಕ್ ಜಾಮ್ ಆದಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತು ಬಿಡುತ್ತವೆ.

ಇದಕ್ಕೆ ಪ್ರಮುಖ ಕಾರಣ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳಾದರೆ, ಇನ್ನೊಂದು ಸರಿಯಾದ ಪಾರ್ಕಿಂಗ್ ನ ಕೊರತೆ ಎನ್ನಬಹುದು. ಈ ಸಮಸ್ಯೆಯಿಂದಾಗಿ ಬೃಹತ್ ವಾಹನಗಳು ಸೇರಿದಂತೆ ಕಾರು, ಬೈಕ್ ಸವಾರರು ಪರದಾಟ ನಡೆಸಿದರು. ಇನ್ನು ಸ್ಥಳಕ್ಕೆ ಬಂದ ಹೋಮ್ ಗಾರ್ಡ್ ಟ್ರಾಫಿಕ್ ತೆರವುಗೊಳಿಸಲು ಮುಂದಾದರು.

Edited By : Manjunath H D
Kshetra Samachara

Kshetra Samachara

07/01/2021 01:53 pm

Cinque Terre

33.23 K

Cinque Terre

1

ಸಂಬಂಧಿತ ಸುದ್ದಿ