ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಪೊಲೀಸ್‌ ಕಮೀಷನರೇಟ್ ನಲ್ಲಿ ಭಾರಿ ಬದಲಾವಣೆಗೆ ನಾಂದಿ ಹಾಡಿದ ಕಮೀಷನರ್

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ರಾಜ್ಯದ ಇತರೇ ಕಮೀಷನರೇಟ್ ಗಳಿಗೆ ಮಾದರಿಯಾಗುವಂತೆ ಪೊಲೀಸ್ ಆಯುಕ್ತ ಲಾಬೂರಾಮ್ ಯೋಜನೆ ರೂಪಿಸುವುದರ ಜೊತೆಗೆ ಕಾರ್ಯರೂಪಕ್ಕೆ ತರುತ್ತಿದ್ದಾರೆ‌.

ಹೌದು. ಇತ್ತೀಚೆಗೆ ಅವಳಿನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೊಲೀಸರಿಗೆ ವಾರದ ರಜೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿ ಸಿಬ್ಬಂದಿಗೆ ಹೊಸ ವರ್ಷದ ಗಿಪ್ಟ್ ನೀಡಿದ ಕಮೀಷನರ್ ಅವರು ಮತ್ತೊಂಉ ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಅವಳಿ ನಗರದ ವ್ಯಾಪ್ತಿಯಲ್ಲಿ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಸಿಬ್ಬಂದಿ ವರ್ಗಾವಣೆಗೆ ಸಾಕಷ್ಟು ಪರದಾಟ ನಡೆಸಬೇಕಾಗಿತ್ತು.

ಕೆಲವರು ರಾಜಕೀಯ ಒತ್ತಡ ತಂದು ತಮಗೆ ಇಷ್ಟದ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಯೇ ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳುವ ಆರೋಪಗಳು ಕೇಳಿ ಬಂದಿದ್ದವು.

ಆದರೆ ಕಮೀಷನರ್ ಲಾಬೂರಾಮ್ ಅವರು ಇದಕ್ಕೆ ಇತಿ ಶ್ರೀ ಹಾಡಿದ್ದಾರೆ.

ಪದೋನ್ನತಿ ಹೊಂದಿದಂತಹ ಸಿಬ್ಬಂದಿಗಳಿಗೆ ಕೌನ್ಸಲಿಂಗ ಮುಖಾಂತರ ಅವರ ಕೋರಿಕೆಯಂತೆ ಪೊಲೀಸ ಠಾಣೆ ಹಂಚಿಕೆ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.‌

ಇನ್ನು ಮುಂದೆಯೂ ಕೂಡಾ ಸಿಬ್ಬಂದಿ ಉತ್ತಮ ಕರ್ತವ್ಯನಿರ್ವಹಿಸಿಕೊಂಡು ಹೋಗುವಂತೆ ಸೂಚಿಸಿದರು.‌ ಇದು ಪೊಲೀಸರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

Edited By : Nirmala Aralikatti
Kshetra Samachara

Kshetra Samachara

07/01/2021 10:22 am

Cinque Terre

29.28 K

Cinque Terre

0

ಸಂಬಂಧಿತ ಸುದ್ದಿ