ವರದಿ:ಈರಣ್ಣ ವಾಲಿಕಾರ
ಹುಬ್ಬಳ್ಳಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ ನಮ್ಮ ಹುಬ್ಬಳ್ಳಿ. ಈ ನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಶುಲ್ಕಕ್ಕಾಗಿ ಚೀಟಿ ಹಿಡಿದುಕೊಂಡು ಬರುತ್ತಿರುವವರಿಗೆ, ಮಹಾನಗರ ಪಾಲಿಕೆ ಬ್ರೇಕ್ ಹಾಕಿದೆ. ಅಷ್ಟಕ್ಕೂ ಯಾಕೆ ಅಂತಿರಾ? ಈ ಸ್ಟೋರಿ ನೋಡಿ.
ಹುಬ್ಬಳ್ಳಿ ಧಾರವಾಡದಲ್ಲಿ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ, ಶುಲ್ಕ ಪಡೆಯುವ ಅವಧಿ ಮುಕ್ತಾಯಗೊಂಡಿರುವ ವಿಷಯ ಎಷ್ಟೋ ಜನರಿಗೆ ತಿಳಿದಿಲ್ಲವೆಂದು ಇನ್ನೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
ನಗರದೆಲ್ಲೆಡೆ ಅಂದಾಜು 20 ವಾಹನಗಳು ನಿಲುಗಡೆಗೊಳ್ಳುವ ಪ್ರದೇಶದಲ್ಲಿ 91,500 ರೂ. ಮೊತ್ತದ ಟೆಂಡರ್ ಅಂತಿಮಗೊಂಡಿದೆ. ಆದರೆ ಮಹಾನಗರ ಪಾಲಿಕೆಯಿಂದ ಇನ್ನೂ ವರ್ಕ್ ಆರ್ಡರ್ ನೀಡಿಲ್ಲ. ಈ ತಿಂಗಳ ಕೊನೆಯಲ್ಲಿ ಆದೇಶ ನೀಡುವ ನಿರೀಕ್ಷೆ ಇದೆ.
ಹಾಗಾಗಿ ಅಲ್ಲಿಯೂ ಸದ್ಯಕ್ಕೆ ಪಾರ್ಕಿಂಗ್ ಶುಲ್ಕ ವಸೂಲಿ ಜಾರಿಯಿಲ್ಲ. ಆದ್ದರಿಂದ ಯಾರು ಪಾರ್ಕಿಂಗ್ ಶುಲ್ಕ ಕಟ್ಟಿವಂತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ್ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಮಹಾನಗರ ಪಾಲಿಕೆಯೂ ಹುಬ್ಬಳ್ಳಿಯ 8 ಹಾಗೂ ಧಾರವಾಡದ 2 ಪ್ರದೇಶಗಳಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಹಿಂದೆಯೂ ಟೆಂಡರ್ ಕರೆಯಲಾಗಿತ್ತು. ಅದರೆ, ಪಾಲಿಕೆಯ ದರ ಹೊಂದದ ಕಾರಣ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೂ ಪಾಲ್ಗೊಂಡಿರಲಿಲ್ಲ.
ಪಾರ್ಕಿಂಗ್ ಶುಲ್ಕದ ಟಿಂಡರ್‌ನಿಂದಲೇ ಪಾಲಿಕೆಗೆ ವಾರ್ಷಿಕ 80 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಆದಾಯವಿದೆ. ಧಾರವಾಡದಲ್ಲಿ ಸುಮಾರು 1 ವರ್ಷದಿಂದ ಪಾರ್ಕಿಂಗ್ ಶುಲ್ಕಕ್ಕಾಗಿ ಟೆಂಡರ್ ನೀಡಿಲ್ಲ.
ಹುಬ್ಬಳ್ಳಿ ದುರ್ಗದಬೈಲ್ ಹಾಗೂ ಬೆಳಗಾವಿ ಗಲ್ಲಿಯಲ್ಲಿ ಈ ಮೊದಲು ಕರೆದಿದ್ದ 7.91 ಲಕ್ಷ ರೂ. ಮೊತ್ತದ ಟೆಂಡರ್ ಅವಧಿ ಹಾಗೂ ಕೊಪ್ಪಿಕರ ರಸ್ತೆಯಲ್ಲಿ ಕರೆದಿದ್ದ 8.20 ಲಕ್ಷ ರೂ .
ಟೆಂಡರ್ ಅವಧಿ ಇದೇ ಜನವರಿ 2 ರಂದು ಪೂರ್ಣಗೊಂಡಿದೆ. ಆದರೂ ಕೆಲವು ಪಾರ್ಕಿಂಗ್ ಸ್ಥಳದಲ್ಲಿ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ವಾಹನ ಸವಾರರ ಆರೋಪವಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡುವ ವೇಳೆ, ಯಾರಾದರೂ ಶುಲ್ಕ ಕೇಳಿದರೆ ಎಚ್ಚರವಾಗಿರಿ. ಸುಳ್ಳು ಹೇಳಿ ಹಣ ತೆಗೆದುಕೊಳ್ಳುವ ದಂಧೆ ಪ್ರಾರಂಭವಾಗುವ ಶಂಕೆ ವ್ಯಕ್ತವಾಗಿದೆ..!
Kshetra Samachara
07/01/2021 09:00 am