ಹುಬ್ಬಳ್ಳಿ : ಕೊರೊನಾ ಹಿನ್ನಲೆಯಲ್ಲಿ ನವಲೂರಿನಿಂದ ಸತ್ತೂರಿನ ಬಿಆರ್ ಟಿಎಸ್ ಬಸ್ ಕಾರಿಡಾರ್ ವರೆಗೆ ಬಸ್ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಸದ್ಯ ಗ್ರಾಮಸ್ಥರ ಒತ್ತಾಯದ ಮೇರೆಗೆ ಮತ್ತೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಪ್ರಯಾಣಿಕರ ಹೆಚ್ಚಳ ಮತ್ತು ಸಾರ್ವಜನಿಕರ ಒತ್ತಡದಿಂದಾಗಿ ಬಸ್ ಸಂಚಾರ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 6: 40 ರಿಂದ ರಾತ್ರಿ 9: 30 ರ ವರೆಗೆ ಬಸ್ ಸಂಚಾರ ಇರಲಿದೆ ಎಂದರು.
ನವಲೂರು ಗ್ರಾಮದಿಂದ ಬಸ್ ಕಾರಿಡಾರ್ ವರೆಗೆ ಹಾಗೂ ನವಲೂರು ಗ್ರಾಮದವರೆಗೆ ಬಸ್ ಸಂಚಾರ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Kshetra Samachara
06/01/2021 11:46 am