ಅಣ್ಣಿಗೇರಿ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಅಳವಡಿಸಿದ ಹೈಮಾಸ್ಕ ವಿದ್ಯುತ್ ದ್ವೀಪ ಇದ್ದು ಇಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಅಧಿಕಾರಿಗಳ ವಿರುದ್ಧ ಆರೋಪಿಸುತ್ತಿದ್ದಾರೆ.
ಎಪಿಎಂಸಿ ಆವರಣದಲ್ಲಿ ಈಗಾಗಲೇ ಸುಮಾರು ರೈತರು ತಾವು ಬೆಳೆದ ಮೆಣಸಿನಕಾಯಿ ಹಣ್ಣನ್ನು ಒಣಗಲಿಕ್ಕೆ ಹಾಕಿದ್ದಾರೆ. ಆವರಣ ಬೃಹದಾಕಾರವಾಗಿದ್ದರಿಂದ ರಾತ್ರಿ ವೇಳೆಯಲ್ಲಿ ಅಲ್ಲಿ ವಾಸಿಸುವದಕ್ಕೆ ತುಂಬಾ ಅನಾನುಕೂಲವಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ಬಂದ ಆಗಿರುವ ಹೈಮಾಸ್ಕ ವಿದ್ಯುತ್ ದೀಪಗಳನ್ನು ಹಚ್ಚುವಂತೆ ಸಿಬ್ಬಂದಿಗಳಿಗೆ ತಿಳಿಸಿದರೆ ಕ್ಯಾರೆ ಎನ್ನುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಈ ಕುರಿತು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ... ಹೈಮಾಸ್ಕ ಬಗ್ಗೆ ಕಚೇರಿಯಲ್ಲಿನ ಕಾಗದ ಪತ್ರಗಳನ್ನು ಪರಿಶೀಲಿಸಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
Kshetra Samachara
05/01/2021 06:54 pm