ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಸಗೀಕರಣ, ರಿಯಲ್ ಎಸ್ಟೇಟ್ ಎಫೆಕ್ಟ್- ಕ್ರೀಡಾಭಿಮಾನಿಗಳಿಗೆ ಕೈಗೆಟಕದ ಕ್ರೀಡಾಂಗಣಗಳು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಈ ಹಿಂದೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಟ ಆಡಲು ದೂರ ಹೋಗಬೇಕಿರಲಿಲ್ಲ. ಒಂದು ಏರಿಯಾದಲ್ಲಿ ಒಂದು ಅಥವಾ ಎರಡು ಕ್ರೀಡಾಂಗಣಗಳು ಸಿಗುತ್ತಿದ್ದವು.

ಆದರೆ ಈಗ ಖಾಸಗೀಕರಣ ಹಾಗೂ ರಿಯಲ್ ಎಸ್ಟೇಟ್ ಎಫೆಕ್ಟ್ನಿಂದ ಕ್ರೀಡಾಂಗಣಗಳು ಮಾಯವಾಗುತ್ತಿವೆ. ಕೆಲವು ಇದ್ದರೂ ವ್ಯಾಪಾರಿಕರಣವಾಗಿವೆ.

ನಗರದಲ್ಲಿ ಕ್ರೀಡಾಭಿಮಾನಿಗಳಿಗೆ ಕ್ರೀಡಾಂಗಣಗಳು ಕೈಗೆಟಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಆಟವಾಡಲು ಇದ್ದ ಖಾಲಿ ಜಾಗಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಬಿಲ್ಡರ್ಗಳು ಕಬಳಿಸಿದ್ದಾರೆ.

ಯಾವುದೇ ಜಾಗವನ್ನು ಖಾಲಿ ಬಿಡದೆ ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಮಾಡಿದ್ದಾರೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ -ಧಾರವಾಡದಲ್ಲೂ ಹಲವು ಮೈದಾನಗಳು ವಾಣಿಜ್ಯೀಕರಣವಾಗಿವೆ.

ನಗರದ ನೆಹರೂ ಕ್ರೀಡಾಂಗಣ ಮಹಾನಗರ ಪಾಲಿಕೆ ಸುಪರ್ದಿಗೆ ಬಂದರೂ ಇಲ್ಲಿ ಆಟಗಳು ನಡೆಯುವುದಕ್ಕಿಂತ ಹೆಚ್ಚಾಗಿ ಸರ್ಕಾರಿ ಹಾಗೂ ಖಾಸಗಿ ಸಭೆ ಸಮಾರಂಭಗಳಿಗೆ ಮೀಸಲಾಗಿದೆ.

ಇನ್ನೂ ಕೆಎಸ್ಸಿ ಹಾಗೂ ರೈಲ್ವೆ ಕ್ರೀಡಾಂಗಣಗಳು ಇದ್ದು ಇಲ್ಲದಂತಾಗಿವೆ. ಕೆಎಸ್ಸಿಯಲ್ಲಿ ಆಡಲು ಹಣವನ್ನು ಪಾವತಿ ಮಾಡಬೇಕಿದೆ. ಇತ್ತ ರೈಲ್ವೆ ಕ್ರೀಡಾಂಗಣ ರೈಲ್ವೆ ಸಿಬ್ಬಂದಿಗೆ ಸೀಮಿತವಾಗಿವೆ.

ನಗರದಲ್ಲಿ ಹಲವು ಕ್ರೀಡಾಂಗಣಗಳು ಇದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

ಕೊರೊನಾ ಪೂರ್ವದಲ್ಲಿ ಕ್ರೀಡೆ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಜನರು, ಈಗ ಕ್ರೀಡಾಂಗಣದತ್ತ ಮುಖ ಮಾಡುತ್ತಿದ್ದಾರೆ.

ಆದರೆ ಜನರು ವಾಕ್ ಹಾಗೂ ವ್ಯಾಯಾಮ ಮಾಡಲು ಕ್ರೀಡಾಂಗಣಗಳ ಕೊರತೆ ಎದುರಿಸುವ ಸ್ಥಿತಿ ನಗರಗಳಲ್ಲಿ ಇದ್ದು, ಜನಪ್ರತಿನಿಧಿಗಳು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಒಟ್ಟಿನಲ್ಲಿ ನಮ್ಮ ಹುಬ್ಬಳ್ಳಿ ಧಾರವಾಡದಲ್ಲಿ ಎಷ್ಟೋ ಗ್ರೌಂಡ್ಗಳು ಖಾಸಗೀಕರಣಗೊಂಡು ಸಾರ್ವಜನಿಕರಿಗೆ ಆಟವಾಡಲು ಮೈದಾನಗಳ ಕೊರತೆ ಇದೆ.

ಆದಷ್ಟು ಸಂಬಂಧಿಸಿದ ಅಧಿಕಾರಿಗಳು ಇದ್ದ ಗ್ರೌಂಡ್ಗಳನ್ನು ಸಾರ್ವಜನಿಕರಿಗೆ ಬೀಡಿ ಎಂದು ಕ್ರೀಡಾಭಿಮಾನಿಗಳು ಪಬ್ಲಿಕ್ ನೆಕ್ಸ್ಟ್ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

04/01/2021 12:30 pm

Cinque Terre

31.55 K

Cinque Terre

1

ಸಂಬಂಧಿತ ಸುದ್ದಿ