ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯವರು ಹು-ಧಾದ ಬೀದಿ ಬದಿ ವ್ಯಾಪಾರಸ್ಥರನ್ನು ಅಕ್ರಮವಾಗಿ ಬಲವಂತದ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಇದು ಕೊರೋನಾ ನಂತರದ ಮಾರಕ ವಾತಾವರಣದಲ್ಲಿ ನಡೆಸುತ್ತಿರುವ ದೌರ್ಬಲ್ಯವಾಗಿದೆ.
ಕೂಡಲೇ ತೆರವು ಕಾರ್ಯಾಚರಣೆ ಕೈಬಿಟ್ಟು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಿಯಮಾನುಸಾರ ಬೀದಿಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.
ಅವಳಿನಗರದಲ್ಲಿ ಸುಮಾರು 20,000 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿದ್ದು, ಈ ವ್ಯಾಪಾರಸ್ಥರ ಹಿತಕ್ಕಾಗಿ ಬೀದಿ-ಬದಿ ವ್ಯಾಪಾರಸ್ಥರಿಂದಲೇ ಸರ್ಕಾರ ಘನ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಚುನಾವಣೆಯನ್ನು ಸಹ ನಡೆಸಿದ್ದು, ಈವರೆಗೆ ಪಾಲಿಕೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹಿತಕ್ಕಾಗಿ ಯಾವುದೇ ಒಂದು ಸಭೆ ನಡೆಸದೇ ಇರುವುದು ವಿಷಾದಕರ ಎಂದರು.
Kshetra Samachara
02/01/2021 12:01 pm