ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಂಠಿತಗೊಳ್ಳುತ್ತಿದೆ ಸ್ಮಾರ್ಟ್ ಸಿಟಿ ವ್ಯವಸ್ಥೆ! ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದಾರೆ ಜನರು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹೀಗೆ ಚುರಿಯಂತೆ ಜೀವಕ್ಕಾಗಿ ಕಾಯ್ದು ನಿಂತಿರುವ ಕಬ್ಬಿಣದ ರಾಡ್ ಗಳು, ಅರ್ದಂಬರ್ದ್ ಮಾಡಿರುವ ಗಟರ ವ್ಯವಸ್ಥೆ, ಪಾದಾಚಾರಿಗಳು ಜೀವ ಹಿಡಿದುಕೊಂಡು ಓಡಾವಂತಹ ಪರಿಸ್ಥಿತಿ ಎದುರಾಗಿರುವ ಈ ರಸ್ತೆ ಬೇರೆ ಎಲ್ಲೂ ಅಲ್ಲ. ವಾಣಿಜ್ಯ ನಗರಿಯ ಹಾರ್ಟ್ ಆಫ ಸಿಟಿ, ರೈಲ್ವೆ ಸ್ಟೇಷನ್ ರಸ್ತೆ.

ಈ ರಸ್ತೆಯಲ್ಲಿಯೇ ವಾಣಿಜ್ಯ ಮಳಗಿಗಳು ಇರುವುದರಿಂದ, ಇಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಆದರೆ ಇಲ್ಲಿನ ಸ್ಮಾರ್ಟ್ ಸಿಟಿ ವ್ಯವಸ್ಥೆ ಮಾತ್ರ ಇನ್ನು ವರೆಗೂ ಕುಂಟಿತವಾಗಿದೆ. ಇದರಿಂದ ಬೇಸತ್ತ ಇಲ್ಲಿನ ಅಂಗಡಿಗಾರರು, ವ್ಯಾಪಾರಸ್ಥರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಅಧಿಕಾರಿಗಳಿಗೆ ಏನು ಹೇಳಿದ್ದಾರೆ ನೋಡಿ.

ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಆಗಲೆಂಂದು, ನಮ್ಮ ಜನಪ್ರತಿನಿದಿಗಳು, ವರ್ಷ ವರ್ಷಗಳ ಕಾಲ ಸಮಯ ತೆಗೆದುಕೊಳ್ಳತ್ತಿದ್ದಾರೆ. ಆದರೆ ಇನ್ನೂವರೆಗೂ ನಮ್ಮ ಹುಬ್ಬಳ್ಳಿ ಜನಕ್ಕೆ ಸ್ಮಾರ್ಟ್ ಸಿಟಿ ನೋಡುವ ಭಾಗ್ಯ ದೊರಕಿಲ್ಲ.

ಈ ಸ್ಟೇಷನ್ ರಸ್ತೆ ತುಂಬ ಚಿಕ್ಕದಾಗಿದ್ದು, ಕಾಮಗಾರಿಯನ್ನು ಬೇಗ ಮುಗಿಸುವುದಕ್ಕೆ ಆಗುತ್ತಿಲ್ಲ ಅಧಿಕಾರಿಗಳಿಗೆ. ಅಷ್ಟೆ ಅಲ್ಲದೇ ಕಾಮಗಾರಿ ಕುಂಟಿತಗೊಳ್ಳುತ್ತಿರುವುದರಿಂದ ಇಲ್ಲಿನ ವ್ಯಾಪಾರಸ್ಥರು ಧೂಳಿನಲ್ಲಿ ಕಾಲ ಕಳೆಯಬೇಕಾಗಿದೆ.

ಒಟ್ಟಿನಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಈ ಸ್ಟೇಷನ್ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ನಿರ್ಮಿಸಿಕೊಡಬೇಕೆಂದು ಇಲ್ಲಿನ ವ್ಯಾಪಾರಸ್ಥರ ಅಳಲಾಗಿದೆ.

Edited By : Manjunath H D
Kshetra Samachara

Kshetra Samachara

26/12/2020 03:11 pm

Cinque Terre

55.81 K

Cinque Terre

18

ಸಂಬಂಧಿತ ಸುದ್ದಿ