ಅಣ್ಣಿಗೇರಿ: ಬೇಸಿಗೆ ಬಂತೆಂದರೆ ಸಾಕು. ಸಾಮಾನ್ಯರಿಗೆ ಮೊದಲು ಕಾಡೋದೇ ನೀರಿನ ಸಮಸ್ಯೆ. ಕೆಲವು ಕಡೆಗಳಲ್ಲಿ ಈ ಬಾರಿಯಾದ್ರೂ ಸಕಾಲಕ್ಕೆ ನೀರು ಬಿಡುತ್ತಾರೋ ಇಲ್ಲವೋ ಎಂಬ ಚಿಂತೆಯಲ್ಲಿ ಜನರು ಬೇಸಿಗೆ ಕಳೆಯುವಂತ ಪರಿಸ್ಥಿತಿ ಇರುತ್ತೆ
ಆದರೆ ಈಗ ಜಿಲ್ಲೆ ಸೇರಿದಂತೆ ಪಟ್ಟಣದಲ್ಲಿ ಈ ಬಾರಿ ಮಳೆಗಾಲ ಸಂತೃಪ್ತಿ ತಂದಿದೆ. ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳು, ಕೆರೆಗಳು ತುಂಬಿವೆ. ಅದೇ ರೀತಿ ಪಟ್ಟಣದ ಅಂಬಿಗೇರಿ ಕ್ರಾಸ್‌ನ ಬಳಿ ಇರುವ ಸುಮಾರು 23 ಎಕರೆಯಲ್ಲಿನ ಕೆರೆಗೆ ಈ ಸಲ ಮಳೆಯಿಂದ ಹಾಗೂ ಮಲಪ್ರಭಾ ಬಲ ದಂಡೆಯಿಂದ ಪೈಪ್ ಲೈನ್ ಮುಖಾಂತರ ಕುಡಿಯುವ ನೀರನ್ನು ಕೆರೆಗೆ ತುಂಬಿಸಲಾಗಿದೆ. ಈಗ ಕೆರೆ ಸಂಪೂರ್ಣ ಭರ್ತಿಯಾಗಿ ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಸಜ್ಜಾಗಿದೆ.
ಇನ್ನು ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್ ಕಟಗಿ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು ಹೀಗೆ...
ಒಟ್ಟಾರೆ ಬೇಸಿಗೆಯಲ್ಲಿ ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆಯಾಗುವ ಆಕಾಂಕ್ಷೆ ಪಟ್ಟಣದ ಸಾರ್ವಜನಿಕರಲ್ಲಿದೆ.
Kshetra Samachara
30/03/2022 08:20 pm