ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿ ನಗರದಲ್ಲಿ ನೀರು ಸರಬರಾಜು; ಪಾಲಿಕೆಯದ್ದೇ ಸಂಪೂರ್ಣ ಜವಾಬ್ದಾರಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನೀರು ಸರಬರಾಜು, ಶುಲ್ಕ ಸಂಗ್ರಹ ಹಾಗೂ ನಿರ್ವಹಣೆ ಸೇರಿದಂತೆ ವಿವಿಧ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯ ಜಲಮಂಡಳಿ ಈಗಾಗಲೇ ಹಂತ– ಹಂತವಾಗಿ ಎಲ್‌ ಆ್ಯಂಡ್ ಟಿ ಕಂಪನಿಯ ಕೈಗೆ ಕೊಟ್ಟಿದೆ.

ನಗರದಲ್ಲಿ ನೀರು ಪೂರೈಕೆಯಂತಹ ಮಹತ್ವದ ಜವಾಬ್ದಾರಿಯನ್ನು ಖಾಸಗಿ ಕಂಪನಿಯ ಹೆಗಲ ಮೇಲೆ ಇರಿಸಲಾಗಿದೆ. ಜಲಮಂಡಳಿಯ ನಿತ್ಯ ಜವಾಬ್ದಾರಿಗಳನ್ನು ಖಾಸಗಿ ಸಂಸ್ಥೆಗೆ ನೀಡಿರುವುದರಿಂದ ಮುಂದೆ ಜಲಮಂಡಳಿ ವಿಭಾಗವು ಹುಬ್ಬಳ್ಳಿ ಧಾರವಾಡದಲ್ಲಿ ಅಧಿಕೃತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ‍ನಗರದಲ್ಲಿ ಸುಗಮ ನೀರು ಸರಬರಾಜಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪಾಲಿಕೆಯು ಜಲಮಂಡಳಿಯ ಕೆಲವು ಅಧಿಕಾರಿಗಳನ್ನು ಕಂಪನಿಗೆ ಬೆನ್ನೆಲುಬಾಗಿ ಕೆಲಸ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದೆ. ಎಲ್ ಆ್ಯಂಡ್ ಟಿ ಕಂಪನಿಗೆ ನೀರು ಪೂರೈಕೆ ಮತ್ತು ನಿರ್ವಹಣೆ ಹೊಣೆ ನೀಡಲಾಗಿದೆಯಾದರೂ, ಅವಳಿ ನಗರಕ್ಕೆ ನೀರು ಪೂರೈಸುವ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದೇ ಆಗಿರುತ್ತದೆ.

ಇನ್ನು ಖಾಸಗಿ ಸಂಸ್ಥೆಗೆ ನೀರು ಪೂರೈಕೆ ಜವಾಬ್ದಾರಿಯನ್ನು ನೀಡುತ್ತಿರುವುದರಿಂದ ಮುಂದೆ ಶುಲ್ಕ ವ್ಯವಸ್ಥೆ ಹೇಗೆ ಇರಲಿದೆ ಎನ್ನುವ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಈ ಕುರಿತು ಪಾಲಿಕೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ಜಲಮಂಡಳಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿತ್ತು. ಜನ ಶುಲ್ಕ ಪಾವತಿಸದಿದ್ದರೆ ಅಥವಾ ವಿಳಂಬ ಮಾಡಿದರೆ ಹೆಚ್ಚು ದಂಡ ವಿಧಿಸುತ್ತಿರಲಿಲ್ಲ. ಸಂಪರ್ಕ ಕಡಿತಗೊಳಿಸುತ್ತಿರಲಿಲ್ಲ. ಕಾನೂನಿನಲ್ಲಿಯೂ ಇದಕ್ಕೆ ಅವಕಾಶವಿರಲಿಲ್ಲ. ಆದರೆ, ಖಾಸಗಿ ಕಂಪನಿಗೆ ಈ ನಿರ್ಬಂಧಗಳಿರುವ ಸಾಧ್ಯತೆ ಕಡಿಮೆ ಇರಬಹುದೆಂದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಇನ್ಮುಂದೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು ಪಾಲಿಕೆಯ ವಲಯ ಕಚೇರಿಗೆ ಬರಬಹುದು. ಪಾಲಿಕೆಯ ಸಹಾಯವಾಣಿಯೂ ಇದೆ. ಹುಬ್ಬಳ್ಳಿಯ ಪಾಲಿಕೆ ಕಚೇರಿಯಲ್ಲಿರುವ ಜಲಮಂಡಳಿ ಕಟ್ಟಡದಲ್ಲೇ ಎಲ್‌ ಆ್ಯಂಡ್ ಟಿ ಸಿಬ್ಬಂದಿ ಕಾರ್ಯನಿರ್ಹಿಸಲಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
Kshetra Samachara

Kshetra Samachara

14/06/2022 01:49 pm

Cinque Terre

17.54 K

Cinque Terre

2

ಸಂಬಂಧಿತ ಸುದ್ದಿ