ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವದಂತಿ ನಂಬಿ ಆರ್ ಎಫ್ ಐ ಡಿ ನಾಶ: ಸಾರ್ವಜನಿಕರಲ್ಲಿ ಗೊಂದಲ

ಹುಬ್ಬಳ್ಳಿ: ತಮ್ಮ ಪ್ರತಿ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ. ಸಮುದಾಯದರನ್ನು ಗುರಿಯಾಗಿಸಿ ಕಣ್ಣೀಡಲಾಗುತ್ತಿದೆ. ಕೊರೊನಾ ಸೋಂಕಿತರನ್ನು ಪತ್ತೆ ಹೆಚ್ಚಲು ಗಮನಹರಿಸಲಾಗುತ್ತಿದೆ.

ಹೀಗೆ ನಾನಾ ರೀತಿಯ ಮೇಸೆಜ್ ಗಳು ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿರುವುದನ್ನೇ ನಂಬಿದ ನಾಗರಿಕರು ಮನೆ ಬಾಗಿಲಿಗೆ ಅಳವಡಿಸಿದ್ದ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಸಾಧನಗಳನ್ನುಕಿತ್ತು ಹಾಕುತ್ತಿದ್ದಾರೆ..!

ಹೌದು, ಇಂಥಹ ಪ್ರಕರಣಗಳು ಹಳೆ ಹುಬ್ಬಳ್ಳಿ ಪ್ರದೇಶಗಳಲ್ಲಿ ನಡೆಯುತ್ತಿದ್ದು,ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ ಎಫ್ಐಡಿ ಬಗ್ಗೆ ತಿಳಿವಳಿಕೆ ನೀಡಲು ಹರಸಾಹಸ ಪಡುತ್ತಿದ್ದಾರೆ.

ಆರ್ ಎಫ್ ಐಡಿ ಯಿಂದ ಮನೆ ಮಂದಿಯ ಬಗ್ಗೆ ತಿಳಿದುಕೊಂಡು ಅದರಿಂದ ತೊಂದರೆಯಾಗುತ್ತಿದೆ ಎಂದುಕೊಂಡು ನೂರಾರು ನಿವಾಸಿಗಳು ಆರ್ಎಫ್ಐಡಿ ಸಾಧನಗಳನ್ನು ನಾಶಪಡಿಸಿದ್ದರೆ.

ನಿರ್ದಿಷ್ಟ ಸಮುದಾಯಕ್ಕೆ ಸೇರಿದ ನಿವಾಸಿಗಳು ಮಾತ್ರ ತೆಗೆದಿದ್ದಾರೆ. ಇದನ್ನು ಖಚಿತ ಪಡಿಸಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ನೂರಾರು ಏನಿಲ್ಲ, 24-25 ಮನೆಯವರು ಮಾತ್ರ ತೆಗೆದಿದ್ದಾರೆ ಎಂದು ಹೇಳುತ್ತಾರೆ.

ಅವಳಿ ನಗರದಲ್ಲಿ ಮನೆ ಮನೆಗಳಲ್ಲಿ ಕಸ ಸಂಗ್ರಹಣೆ, ಸಾಗಣೆ ಮೇಲೆ ನಿಗಾ ಇಡಲು ಸ್ಮಾರ್ಟ್ ಸಿಟಿ ಯೋಜನೆಯಡಿ ಆರ್ಎಫ್ಐಡಿ ಗಳನ್ನು ಮನೆ ಬಾಗಿಲಿಗೆ ಅಳವಡಿಸಲಾಗುತ್ತಿದೆ.

ಆದರೆ, ಅಲ್ಲಿನ ನಿವಾಸಿಗಳು ಕೊರೊನಾ ಸೋಂಕಿತರು, ಶಂಕಿತರು ಎಂಬ ಚಲನವಲನಗಳ ಆಧರಿಸಿ ಮನೆಗಳನ್ನು ಸೀಲ್ ಡೌನ್, ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಸಂದೇಶಗಳು ಹರಿದಾಡಿದ್ದವು. ಇದನ್ನೇ ನಂಬಿದ ನಿವಾಸಿಗಳು ಆರ್ಎಫ್ಐಡಿಗಳನ್ನು ಕಿತ್ತೆಸೆದಿದ್ದಾರೆ.

ಆರ್ಎಫ್ಐಡಿ ಯಿಂದ ಯಾರಿಗೂ ಯಾವ ಕುಟುಂಬಗಳಿಗೆ ತೊಂದರೆ ಇಲ್ಲ, ಇದು ಕಸ ಸಂಗ್ರಹಣೆ ಮತ್ತು ಸಾಗಿಸುವ ಪೌರಕಾರ್ಮಿಕರ ಚಲನವಲನಗಳ ಮೇಲೆ ಕಣ್ಣೀಡಲಾಗುತ್ತಿದೆ ಹೊರತು ಕುಟುಂಬಗಳಿಗೆ ಅಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಅಲ್ಲಿನ ನಿವಾಸಿಗಳು ನಂಬದ ಸ್ಥಿತಿಯಲ್ಲಿದ್ದಾರೆ.

Edited By :
Kshetra Samachara

Kshetra Samachara

21/09/2020 09:41 pm

Cinque Terre

66.73 K

Cinque Terre

6

ಸಂಬಂಧಿತ ಸುದ್ದಿ