ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಸದಲ್ಲಿ ರಸ ತೆಗೆಯುವ ಮಹಾನಗರ ಪಾಲಿಕೆ ವಿನೂತನ ಪ್ರಯತ್ನ: ಟೊರಿಫೈಡ್ ಚಾರಕೋಲ್ ಘಟಕ ಸ್ಥಾಪನೆ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹು-ಧಾ ಅವಳಿನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದೇ ಒಂದು ದೊಡ್ಡ ತಲೆನೋವಾಗಿದ್ದು,ತ್ಯಾಜ್ಯ ವಿಲೇವಾರಿ ಜೊತೆಗೆ ಕಸದಲ್ಲಿ ರಸ ತೆಗೆಯುವ ವಿನೂತನ ಪ್ರಯೋಗವೊಂದನ್ನು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

ಹೌದು..ನಗರದಲ್ಲಿನ ಘನ ತ್ಯಾಜ್ಯವನ್ನು ಬಳಸಿಕೊಂಡು ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುವ ಟೊರಿಫೈಡ್ ಚಾರಕೋಲ್ (ಇದ್ದಿಲು) ಉತ್ಪಾದನಾ ಘಟಕ ಹುಬ್ಬಳ್ಳಿ ಗಬ್ಬೂರಿನಲ್ಲಿ ತಲೆ ಎತ್ತಲಿದ್ದು,ತ್ಯಾಜ್ಯದ ಮೂಲಕ ಇಂಧನ ತಯಾರಿಕೆಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್​ಟಿಪಿಸಿ)ದ ವಿದ್ಯುತ್ ವ್ಯಾಪಾರ ಕೇಂದ್ರವು 45 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪಿಸಲಿದೆ. ಹು-ಧಾ ಮಹಾನಗರ ಪಾಲಿಕೆ ಗಬ್ಬೂರಿನಲ್ಲಿರುವ ತನ್ನ ಒಡೆತನದ 12 ಎಕರೆ ಜಾಗವನ್ನು ನೀಡಲಿದ್ದು,ರಾಜ್ಯದಲ್ಲಿಯೇ ಮೊದಲ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಘಟಕ

ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

ತ್ಯಾಜ್ಯದಿಂದ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಘಟಕಕ್ಕೆ ಹು-ಧಾ ಮಹಾನಗರ ಪಾಲಿಕೆ ನಿತ್ಯ 200 ಟನ್ ಘನ ತ್ಯಾಜ್ಯ ನೀಡಲಿದೆ. ಹುಬ್ಬಳ್ಳಿ ನಗರದಲ್ಲಿ ನಿತ್ಯ 300 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಘಟಕ ನಿರ್ವಹಣೆಗೆ ಬೇಕಾಗುವ ನೀರು ಪೂರೈಕೆ ವ್ಯವಸ್ಥೆಯನ್ನು ಪಾಲಿಕೆ ಕಲ್ಪಿಸಲಿದೆ. ಈ ಸಂಬಂಧ ಪಾಲಿಕೆ – ಎನ್​ಟಿಪಿಸಿ ನಡುವೆ 30 ವರ್ಷಗಳ ಕರಾರು ಏರ್ಪಟ್ಟಿದೆ. ಘಟಕವು ನಿತ್ಯ 200 ಟನ್ ತ್ಯಾಜ್ಯ ಬಳಸಿ 100 ಟನ್ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಂತೆ. 1 ವರ್ಷದೊಳಗೆ ಘಟಕ ಕಾರ್ಯಾಚರಣೆ ಮಾಡಲಿದೆ.

Edited By : Nagesh Gaonkar
Kshetra Samachara

Kshetra Samachara

30/09/2020 04:14 pm

Cinque Terre

28.45 K

Cinque Terre

1

ಸಂಬಂಧಿತ ಸುದ್ದಿ