ಧಾರವಾಡ : ಮಲಪ್ರಭಾ ಯೋಜನಾ ವಲಯದ ರೇಣುಕಾ ಸಾಗರ ಜಲಾಶಯದಿಂದ ಕಳೆದ ನವೆಂಬರ್ 10 ರಿಂದ ಕೃಷಿ ಉದ್ದೇಶಕ್ಕಾಗಿ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ, ಏತ ನೀರಾವರಿ ಯೋಜನೆಗಳು ಹಾಗೂ ಜಲಾಶಯದ ಕೆಳ ಭಾಗದಲ್ಲಿನ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ.
ಮುಖ್ಯ ಕಾಲುವೆ ದಡದಲ್ಲಿ ಈಜಾಡಲು, ದನ ಕರುಗಳ ಮೈ ತೊಳೆಯಲು ಮತ್ತಿತರ ಚಟುವಟಿಕೆಗಳಿಗಾಗಿ ಸಾರ್ವಜನಿಕರು ತೆರಳಿ ಅನಾಹುತಗಳು ಸಂಭವಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಮುಖ್ಯ ಕಾಲುವೆಗಳ ಬಳಿ ಸುತ್ತಾಡುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಬಲದಂಡೆ ಕಾಲುವೆ ವೃತ್ತದ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
07/01/2021 06:43 pm