ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹರಿಹರೇಶ್ವರನ ಹೊಂಡದ ನೈರ್ಮಲ್ಯ ಕಾಪಾಡಲು ಹರನೇ ಬರ್ಬೇಕು

ಕುಂದಗೋಳ : ಪಟ್ಟಣದ ಈ ಪ್ರಕೃತಿ ಸೌಂದರ್ಯ ಯಾವ ಮಲೆನಾಡಿಗೂ ಕಡಿಮೆ ಇಲ್ಲಾ, ಅದರಲ್ಲೂ ಈ ಕೆರೆ ಹೊಂಡಗಳು ಕುಂದಗೋಳದಲ್ಲಿ ತುಸು ಜಾಸ್ತಿಯೇ ಇವೆ. ಹೀಗಿದ್ದರೂ ಸಹ ಅವೆಲ್ಲಾ ನಿರ್ವಹಣೆ ಕೊರತೆಯಿಂದ ಮೂಲೆ ಸೇರಿ ಕಲಷಿತಗೊಂಡು ಅವಸಾನದ ಅಂಚನ್ನು ತಲುಪುತ್ತಿವೆ.

ಶಿವಾಜಿನಗರದಲ್ಲಿರುವ ಈ ಹರಿಹರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡ ಹರಿಹರೇಶ್ವರ ಹೊಂಡವು ಸಹ ಸದ್ಯ ಅವಸಾನದ ಅಂಚಿನಲ್ಲಿದೆ. ಈ ಹಿಂದೆ ಈ ಶಿವಾಜಿನಗರದ ಜನರಿಗೆ ಕುಡಿಯುವ ನೀರಿನ ಮೂಲ ಹಾಗೂ ದೇವಸ್ಥಾನಕ್ಕೆ ಆಭರಣದಂತಿದ್ದ ಈ ಹೊಂಡವೀಗ ಕಲುಷೀತ ನೀರು ಸೇರಿ ಅನೈರ್ಮಲ್ಯರ ಗೂಡಾಗಿದೆ.

ಸಂಪೂರ್ಣ ಹೊಂಡದಲ್ಲಿ ಕೆಸರು ನೀರು ಸಂಗ್ರಹವಾಗಿದ್ದು, ಹೊಂಡದ ಅಂಚಿಗೆ ಕಟ್ಟಿದ ಕಾಂಪೌಂಡ್ ಗೋಡೆ ಬಿದ್ದಿದ್ದು ಅಪಘಾತಕ್ಕೆ ಆಹ್ವಾನ ಇಟ್ಟಂತಾಗಿದೆ. ಇನ್ನು ಗಣೇಶ ಚತುರ್ಥಿ ವೇಳೆ ಗಣೇಶ ಮೂರ್ತಿಗಳನ್ನ ಈ ಹೊಂಡದಲ್ಲಿ ಎಸೆಯುವ ಕಾರಣ ಅನೈರ್ಮಲ್ಯ ಹೆಚ್ಚಾಗಿದ್ದು ಕೆರೆಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಹೊಂಡಕ್ಕೆ ಎಸೆಯುವ ಕಾರಣ ಪುರಾತನ ಕಾಲದ ಹೊಂಡವೊಂದು ಅವಸಾನವಾಗುವ ಎಲ್ಲ ಲಕ್ಷಣಗಳು ಎದ್ದು ತೋರುತ್ತಿವೆ.

ಈ ಬಗ್ಗೆ ಶಿವಾಜಿನಗರದ ನಿವಾಸಿಗಳು ಪುರಾತನ ಕಾಲದ ಹೊಂಡ ಉಳಿವಿಗಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಇಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

19/11/2020 02:42 pm

Cinque Terre

33.26 K

Cinque Terre

2

ಸಂಬಂಧಿತ ಸುದ್ದಿ