ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ವರದಿ: ಹಕ್ಕಿಗಾಗಿ ಧರಣಿಗೆ ಮುಂದಾದ ಹುಣಸಿಕುಮರಿ ಜನ

ಧಾರವಾಡ: ಸ್ವಾತಂತ್ರ ಸಿಕ್ಕು 73 ವರ್ಷಗಳಾದರೂ ಮೂಲ ಸೌಕರ್ಯಗಳನ್ನೇ ಕಾಣದ ಹಳ್ಳಿಗಳು ಧಾರವಾಡದಲ್ಲಿ ಸಾಕಷ್ಟೀವೆ.

ಇದರ ಮೊದಲ ಭಾಗವಾಗಿ ಧಾರವಾಡ ತಾಲೂಕಿನ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹುಣಸಿಕುಮರಿ ಎಂಬ ಗ್ರಾಮದ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು.

ಆ ಗ್ರಾಮಕ್ಕೆ ರಸ್ತೆ, ಆಸ್ಪತ್ರೆ, ಪಡಿತರ ವ್ಯವಸ್ಥೆ ಸೇರಿದಂತೆ ಇನ್ನಿತರ ವಿಷಯಗಳ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿತ್ತು.

ಇಲ್ಲಿನ ಸಮಸ್ಯೆಗಳ ಕುರಿತು ಶಾಸಕ ಸಿ.ಎಂ.ನಿಂಬಣ್ಣವರ ಅವರ ಗಮನ ಸೆಳೆಯಲಾಗಿತ್ತು. ಆದರೆ, ಶಾಸಕರು ಹುಣಸಿಕುಮರಿ ಗ್ರಾಮಸ್ಥರ ನೋವಿಗೆ ಸ್ಪಂದಿಸದೇ ಇದ್ದದ್ದರಿಂದ ಇದೀಗ ಆ ಗ್ರಾಮಸ್ಥರು ತಾವೇ ಎಚ್ಚೆತ್ತುಕೊಂಡು ಧರಣಿಗೆ ಮುಂದಾಗಿದ್ದಾರೆ.

ಸೋಮವಾರ ಧಾರವಾಡದ ಕೆಸಿಡಿ ವೃತ್ತದಿಂದ ಜಿಲ್ಲಾ ಪಂಚಾಯ್ತಿವರೆಗೆ ಹುಣಸಿಕುಮರಿ ಗ್ರಾಮದ ಜನ ತಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ.

ಜಿಲ್ಲಾ ಪಂಚಾಯ್ತಿಗೆ ಬಂದು ಅಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/09/2020 11:38 am

Cinque Terre

63.06 K

Cinque Terre

1

ಸಂಬಂಧಿತ ಸುದ್ದಿ