ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೀಲಮ್ಮನೆ ಕೆರೆ ಪಾವಿತ್ರ್ಯತೆಗೆ ಸವಾಲಾಗಿದೆ ಬಸ್ತಿ ಪ್ಲಾಟ್ ಡ್ರೈನೆಜ್ ವಾಟರ್ ಪೈಪ್

ನವಲಗುಂದ : ನೀಲಮ್ಮನ ಕೆರೆ ಅದು ನವಲಗುಂದ ಜನರ ಜೀವನಾಡಿ ಆಗಿತ್ತು. ಆದರೆ ನೀರು ಕಲುಷಿತಗೊಂಡ ಬೆನ್ನೆಲೆ ಈಗ ನವಲಗುಂದ ಪುರಸಭೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ಸಾಗಿದೆ. ಆದರೆ ಇದಕ್ಕೆ ಈಗ ಒಂದು ಸಮಸ್ಯೆ ಕಾಡುತ್ತಿದೆ ಅದು ಏನು ಅಂತೀರಾ ನಾವು ಹೇಳ್ತಿವಿ ಕೇಳಿ...

ಎಸ್... ನವಲಗುಂದದ ಪುರಸಭೆ ನೀಲಮ್ಮನ ಕೆರೆ ನೀರನ್ನು ಹೊರಹಾಕಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವದು ಸ್ವಾಗತಾರ್ಹ ಸಂಗತಿಯಾದರೂ ಸಹ ನಗರದ ಬಸ್ತಿ ಪ್ಲಾಟ್ ಹಾಗೂ ಜೋಶಿ ಪ್ಲಾಟ್ ಪ್ರದೇಶದ ಮಲೀನಯುಕ್ತ ನೀರು ಕೋಡಿ ಸೇರುವಂತಿದೆ. ಮಲಪ್ರಭಾ ನದಿ ನೀರು ಕಾಲುವೆ ಮೂಲಕ ಬಂದು ಇದೇ ಕೋಡಿ ಮೂಲಕ ಕೆರೆ ಸೇರುತ್ತೆ, ಹೀಗಾಗಿ ಈಗ ಕೋಡಿಗೆ ಸೇರುತ್ತಿರುವ ಮಲೀನ ನೀರಿನಿಂದ ಕೆರೆಯ ಪಾವಿತ್ರ್ಯತೆಗೆ ಸವಾಲು ಎದುರಾಗಿದೆ ಎಂದು ಹೇಳಬಹುದು.

ಈ ಪೈಪ್ ಒಡೆದು ಮಲಪ್ರಭಾ ನೀರು ಪೂರೈಸುವ ಕೆರೆಯ ಕೋಡಿಗೆ ಮಲೀನಯುಕ್ತ ನೀರು ಸೇರುತ್ತಿರುವದನ್ನು ಗುರುತಿಸಲಾರದಷ್ಟು ಪುರಸಭೆ ವಿಫಲವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಮರ್ಪಕ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲದೇ, ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸದ ಹಿನ್ನೆಲೆ ಇಷ್ಟೆಲ್ಲಾ ಸಮಸ್ಯೆ ಬಂದಿದೆ ಎನ್ನಲಾಗುತ್ತಿದೆ. ಇನ್ನು ಮೂಲದಲ್ಲಿಯ ಸಮಸ್ಯೆಯನ್ನು ಬಗೆಹರಿಸದೆ, ಕೆರೆಯ ಪುನರುತ್ಥಾನಕ್ಕೆ ಕೈ ಹಾಕಿರುವದಕ್ಕೆ ಸಾರ್ವಜನಿಕರಿಂದ ವಿರೋಧ ಸಹ ವ್ಯಕ್ತವಾಗಿದೆ.

ನವಲಗುಂದದಲ್ಲಿ ಆಗಾಗ ಸುರಿಯುತ್ತಿವ ಮಳೆಯ ನೀರು ಇದೇ ಕಾಲುವೆ ಮೂಲಕ ಕೆರೆ ಸೇರುತ್ತೆ, ಹೀಗಾಗಿ ಮೊದಲು ಸೋರಿಕೆ ಆಗುತ್ತಿರುವ ಪೈಪ್ ಸರಿ ಪಡಿಸಿ, ನಂತರ ಮಲೀನ ನೀರು ಸಮರ್ಪಕವಾಗಿ ಹೊರ ಹೋಗಲು ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ ಸಹ ಆಗಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By :
Kshetra Samachara

Kshetra Samachara

18/04/2022 12:02 pm

Cinque Terre

23.88 K

Cinque Terre

0

ಸಂಬಂಧಿತ ಸುದ್ದಿ