ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹದಗೆಟ್ಟ ರಸ್ತೆ, ಧೂಳು ಮುಕ್ತ ಹುಬ್ಬಳ್ಳಿ ಯಾಗುವುದು ಯಾವಾಗ?

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಖ್ಯಾತಿಯ, ವಾಣಿಜ್ಯ ನಗರಿ ಹುಬ್ಬಳ್ಳಿ ಇದೀಗ ಹದಗೆಟ್ಟ ರಸ್ತೆಯ ಧೂಳಿನ ನಗರೀಯಾಗಿದೆ. ಈ ಸಮಸ್ಯೆಗೆ ಮುಕ್ತಿ ಸಿಗುವುದಾದರೂ ಎಂದು ಎಂಬುದೇ ಸಾರ್ವಜನಿಕ ಪ್ರಶ್ನೆಯಾಗಿದೆ.

ಹೌದು..‌ ಜನರು ಮನೆಯಿಂದ ಹೊರಗೆ ಬಂದರೇ ಸಾಕು, ಏನಪ್ಪಾ ರಸ್ತೆ, ಏನಪ್ಪಾ ಧೂಳು ನಮ್ಮ ಹುಬ್ಬಳ್ಳಿ ಸುಧಾರಣೆ ಆಗುವುದಾದರು ಯಾವಾಗ ಎಂಬುದೇ ನಿತ್ಯ ಓಡಾಡುವ ಸಾರ್ವಜನಿಕರು ಕೇಳುವ ಪ್ರಶ್ನೆಯಾಗಿದೆ. ಕೊಪ್ಪಿಕರ ರಸ್ತೆ, ಕಮರಿಪೇಟೆ ರಸ್ತೆ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವಾರು ಪ್ರದೇಶದಲ್ಲಿ ಹದಗೆಟ್ಟ ರಸ್ತೆ ಹಾಗೂ ಧೂಳಿನಿಂದ ವಾಹನ ಸವಾರರು ನಿತ್ಯ ಜೀವ ಭೀತಿಯಲ್ಲಿ ಸಂಚರಿಸುವಂತಾಗಿದೆ.

ಕೆಲವೆಡೆ ಧೂಳು ಹಾರದಿರಲು ರಸ್ತೆಗೆ ನೀರು ಹರಿಸುತ್ತಿದ್ದು, ಇದರಿಂದಾಗಿ ಬೈಕ್ ಸವಾರರು ಸ್ಕಿಡ್ ಆಗಿ ಬೀಳುವ ಆತಂಕದಲ್ಲಿ ಸಂಚರಿಸುವಂತಾಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಿ, ಸುಸಜ್ಜಿತ ರಸ್ತೆ ಹಾಗೂ ಧೂಳು ಮುಕ್ತ ನಗರವನ್ನಾಗಿ ಪರಿವರ್ತನೆ ಮಾಡಬೇಕು ಎಂಬುದೇ ಸಾರ್ವಜನಿಕರ ಆಶಯವಾಗಿದೆ.

ಈರಣ್ಣ ವಾಲಿಕಾರ,,,,

ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ,,,,

Edited By :
Kshetra Samachara

Kshetra Samachara

05/02/2022 05:23 pm

Cinque Terre

34.07 K

Cinque Terre

16

ಸಂಬಂಧಿತ ಸುದ್ದಿ