ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಸ್ಯೆ ಬಂದಾಗ ಬರುತ್ತೇ ಕೇವಲ ಸಾಂತ್ವನದ ಮಾತು : ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...!

ಹುಬ್ಬಳ್ಳಿ: ಮಳೆಗಾಲ ಕಡಿಮೆ ಆಯ್ತು ಇನ್ನೇನೂ ಹೊಲದಲ್ಲಿ ದುಡಿದುಕೊಂಡು, ಬೆಳೆದ ಬೆಳೆಯನ್ನು ಮನೆಗೆ ತರುವ ಕನಸನ್ನು ಹೊತ್ತವರ ಕಣ್ಣಲ್ಲಿ ಕಣ್ಣೀರಿನ ಧಾರೆ ಸುರಿಯುವಂತಾಗಿದೆ. ವರುಣನ ಆರ್ಭಟಕ್ಕೆ ಕನಸಿನ ಮನೆಗಳು ನೆಲಕಚ್ಚಿದ್ದು, ಜನರ ಸಮಸ್ಯೆ ಹೇಳ ತೀರದಾಗಿದೆ.

ಹೌದು.. ಧಾರವಾಡ ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆಗೆ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ ಸುಮಾರು ಮನೆಗಳು ನೆಲಕಚ್ಚಿದೆ. ಅಲ್ಲದೇ ಬಹುತೇಕ ಮನೆಗಳು ಜಲಾವೃತವಾಗಿದ್ದು, ಜನರು ಜಲ ದಿಗ್ಬಂದನದ ಜೊತೆಗೆ ಸಮಸ್ಯೆ ಸುಳಿಯಲ್ಲಿ ಜೀವನ ನಡೆಸುವಂತಾಗಿದೆ.

ಈಗಾಗಲೇ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದಿರುವ ಜನರು ಇದ್ದೊಂದು ಗುಡಿಸಲು ಬಿದ್ದಿರುವುದರಿಂದ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದುಕೊಂಡು ಜೀವನ ನಡೆಸುವಂತಾಗಿದೆ. ದುಡಿಯಲು ಶಕ್ತಿ ಇಲ್ಲ. ತಿನ್ನಲು ತುತ್ತು ಅನ್ನಕ್ಕೂ ಪರದಾಡುವ ಈ ಮಹಿಳೆಯರ ಗೋಳು ಹೇಳ ತೀರದಾಗಿದೆ.

ಈಗಾಗಲೇ ಸುಮಾರು ಬಾರಿ ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೊಬ್ಬರೂ ಕೂಡ ಸಹಾಯಕ್ಕೆ ಬಾರದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ. ಸಮಸ್ಯೆ ಬಂದಾಗ ಸಾಂತ್ವನ ಹೇಳುವುದನ್ನು ಬಿಟ್ಟು ಬೇರೆ ಏನನ್ನು ಜನಪ್ರತಿನಿಧಿಗಳು ಮಾಡಿಲ್ಲ ಎಂಬುವುದು ಇಲ್ಲಿನ ಜನರ ಮಾತು.

Edited By : Nagesh Gaonkar
Kshetra Samachara

Kshetra Samachara

06/09/2022 09:00 pm

Cinque Terre

25.19 K

Cinque Terre

1

ಸಂಬಂಧಿತ ಸುದ್ದಿ