ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಿಡದೆ ಸುರಿಯುವ ಮಳೆ ; ಮನೆಗಳಿಗೆ ನುಗ್ಗಿದ ನೀರು, ಬಿದ್ದ ಗೋಡೆ

ಕುಂದಗೋಳ : ಪ್ರಕೃತಿಯೋ ಮುನಿಸೋ, ವರುಣನ ಅಟ್ಟಹಾಸವೋ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ ಅಕ್ಷರಶಃ ಹಳ್ಳಿಗರ ಮನೆಗಳಿಗೆ ದಿಗ್ಬಂಧನ ಹಾಕುತ್ತಿದೆ.

ಭಾರಿ ಮಳೆಯ ಕಾರಣ ಕುಂದಗೋಳ ತಾಲೂಕಿನ ಬಹುತೇಕ ಗ್ರಾಮಗಳಿಗೆ ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕನೇರ್ತಿ, ಹಿರೇನೇರ್ತಿ, ಬೆನಕನಹಳ್ಳಿ, ಗುಡೇನಕಟ್ಟಿ, ಕಡಪಟ್ಟಿ, ಅಲ್ಲಾಪೂರ, ಕುಂದಗೋಳ ಪಟ್ಟಣ ಸೇರಿದಂತೆ ಸಂಶಿ, ಗುಡಗೇರಿ ಅಕ್ಕಪಕ್ಕದ ಗ್ರಾಮಗಳಲ್ಲಿ ವರುಣನ ರೌದ್ರಾವತಾರಕ್ಕೆ ಮನೆಗಳಿಗೆ ನೀರು ನುಗ್ಗಿ ಜನರು ಅಡುಗೆ ಮಾಡಿ ಉಣ್ಣಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಮನೆಗಳಿಗೆ ನೀರು ನುಗ್ಗುತ್ತಿರುವ ಕಾರಣ ಗ್ರಾಮಸ್ಥರು ಮೋಟಾರು ಮೂಲಕ, ಬಕೆಟ್ ತುಂಬಿ ನೀರನ್ನು ಹೊರಹಾಕುವ ದೃಶ್ಯ ಕಂಡು ಬರುತ್ತಿದ್ದು, ಕೆಲ ಮಣ್ಣಿನ ಮನೆಗಳು ಗೋಡೆ ಬಿದ್ದು ಹೋಗಿವೆ.

ಹಳ್ಳಿಗರು ಮನೆ ಕಳೆದುಕೊಂಡು ತಾಲೂಕು ಆಡಳಿತ ಹಾಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಮನೆಗೆ ಪರಿಹಾರ ನೀಡುವಂತೆ ಅಳಲು ತೋಡಿಕೊಳ್ಳುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/09/2022 03:43 pm

Cinque Terre

25.4 K

Cinque Terre

2

ಸಂಬಂಧಿತ ಸುದ್ದಿ