ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಮಳೆಯ ಆರ್ಭಟಕ್ಕೆ ಬೆಚ್ಚಿದ ನವಲಗುಂದ, ಹಲವು ಗ್ರಾಮಗಳು ಸಂಪೂರ್ಣ ಜಲಾವೃತ

ನವಲಗುಂದ : ಸೋಮವಾರ ರಾತ್ರಿ ವರುಣ ಆರ್ಭಟಕ್ಕೆ ನವಲಗುಂದ ಭಾಗದ ಹಲವು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿವೆ.

ಸುರಿದ ಮಳೆಗೆ ಮಂಗಳವಾರ ಮುಂಜಾನೆ ಸುಮಾರು ಮೂರು ಗಂಟೆಗೆ ಭೋಗನೂರ, ನಾಯಕನೂರ ಹಾಗೂ ಖನ್ನೂರ ಗ್ರಾಮಗಳ ಬಳಿ ಹರಿಯುವ ದೊಡ್ಡ ಹಳ್ಳ ಪ್ರವಾಹ ಸೃಷ್ಟಿ ಮಾಡಿದ್ದು, ನೂರಾರು ಎಕರೆ ಜಮೀನಿಗೆ ನುಗ್ಗಿದ್ದಲ್ಲದೆ, ಗ್ರಾಮಗಳಲ್ಲೂ ನೀರು ನುಗ್ಗಿದೆ.

ಇದರಿಂದ ಜನರು ತತ್ತರಿಸಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜನರ ಬದುಕು ಅತಂತ್ರವಾಗಿದೆ. ಈ ಹಿನ್ನೆಲೆ ನವಲಗುಂದ ತಹಶೀಲ್ದಾರ್ ಅನೀಲ ಬಡಿಗೇರ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/09/2022 08:31 am

Cinque Terre

54.24 K

Cinque Terre

1

ಸಂಬಂಧಿತ ಸುದ್ದಿ