ಅಣ್ಣಿಗೇರಿ: ಈಗಾಗಲೇ ರೈತ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿ ಕೈಯಲ್ಲಿದ್ದ ದುಡ್ಡು ಕಳೆದುಕೊಂಡಿದ್ದಾನೆ. ಪರಿಸ್ಥಿತಿ ಹೀಗಿರಬೇಕಾದ್ರೆ ಇಲ್ಲೊಬ್ಬ ರೈತ ಭಾರಿ ಮಳೆಯಿಂದ ಇದ್ದ ಒಂದು ಸೂರನ್ನೂ ಕಳೆದುಕೊಂಡಿದ್ದಾನೆ.
ಹೌದು ತಾಲೂಕಿನ ಭದ್ರಾಪುರ ಗ್ರಾಮದ ಸೋಮನಗೌಡ ಚನ್ನಪ್ಪಗೌಡ ಮರಿಗೌಡ್ರ ಹಾಗೂ ರಹೀಬಿ ಹಂಚಿನಾಳ ಎಂಬ ರೈತರ ಮನೆ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕುಸಿದಿದೆ. ಮನೆಯ ಗೋಡೆಗಳು ಸಂಪೂರ್ಣ ನೆಲಕಚ್ಚಿ ಛಾವಣಿ ಕುಸಿದಿದೆ. ಮೊದಲೇ ಸಾಲಸೂಲ ಮಾಡಿ ಜೀವನ ನಡೆಸುತ್ತಿದ್ದ ರೈತನಿಗೆ ಮನೆಯ ಗೋಡೆ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಂಚಾಯತಿ ಸರ್ವ ಸದಸ್ಯರು ಮತ್ತು ಅಧಿಕಾರಿಗಳು ಸೂರು ಕಳೆದುಕೊಂಡ ರೈತರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಪರಿಶೀಲಿಸಿದ್ದಾರೆ. ರೈತರು ಸರ್ಕಾರದಿಂದ ಬರುವ ನೆರೆಹಾವಳಿ ಮನೆ ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದು, ತಕ್ಷಣವೇ ತಾಲೂಕು ದಂಡಾಧಿಕಾರಿ ಅವರು ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.
ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
31/08/2022 10:59 pm