ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಳೆಯ ಅಬ್ಬರಕ್ಕೆ ಸೊಟಕನಾಳ ಗ್ರಾಮಸ್ಥರು ಕಂಗಾಲು

ನವಲಗುಂದ: ನವಲಗುಂದ ತಾಲ್ಲೂಕಿನಲ್ಲಿ ಮಳೆರಾಯಣ ಅಬ್ಬರ ಮುಂದುವರೆದಿದ್ದು, ಜನರು ಹೈರಾಣಾಗಿದ್ದಾರೆ. ತಾಲ್ಲೂಕಿನ ಸೊಟಕನಾಳ ಗ್ರಾಮದಲ್ಲಿ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿ, ಜನ ಜೀವನ ಅಸ್ತವ್ಯಸ್ತವಾಗಿದೆ.

ಬುಧವಾರ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಒಟ್ಟು 26 ಮನೆಗಳು ನೆಲಕ್ಕಚ್ಚಿದ್ದವು. ಈಗ ಮತ್ತೆ ಮಳೆರಾಯಣ ಆರ್ಭಟ ಮುಂದುವರೆದಿದೆ. ಸೊಟಕನಾಳ ಗ್ರಾಮದಲ್ಲಿ ಸಂಜೆ ನಾಲ್ಕು ಗಂಟೆಗೆ ಆರಂಭವಾದ ಮಳೆ ಏಳು ಗಂಟೆಯವರೆಗೆ ಬಿಟ್ಟು ಬಿಡದೆ ಸುರಿದಿದೆ.

ಇದರಿಂದ ಸೊಟಕನಾಳ ಪ್ಲಾಟ್‌ನಲ್ಲಿನ ರಸ್ತೆಗಳು ಬಹುಷಃ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಕೆಟ್‌ಗಳ ಮೂಲಕ ಜನರು ನೀರು ಹೊರ ತೆಗೆಯಲು ಹರಸಾಹಸ ಪಡುವಂತಾಗಿತ್ತು. ಸಚಿವರ ಕ್ಷೇತ್ರದಲ್ಲೇ ಇಂತಹ ದುಸ್ಥಿತಿಯಲ್ಲಿ ಬದುಕುವ ವಿಪರ್ಯಾಸ ಬಂತಲ್ಲಾ ಅನ್ನೋ ಮಾತುಗಳು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿವೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

30/07/2022 08:26 am

Cinque Terre

37.63 K

Cinque Terre

0

ಸಂಬಂಧಿತ ಸುದ್ದಿ