ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೂರಾರು ಮರಗಳ ಮಾರಣಹೋಮ; ಸಂರಕ್ಷಣೆ ಮಾಡಬೇಕಾದವರಿಂದಲೇ ಸರ್ವನಾಶ...!

ಹುಬ್ಬಳ್ಳಿ: ವಿಶ್ವವೇ ಪರಿಸರ ಸಂರಕ್ಷಣಾ ದಿನವನ್ನು ಆಚರಣೆ ಮಾಡುತ್ತಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಪರಿಸರ ಸಂರಕ್ಷಣೆಗೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಅಂಧಕಾರ ಅವಳಿನಗರಕ್ಕೆ ಬಹುದೊಡ್ಡ ಸಂಕಷ್ಟ ತಂದೊಡ್ಡಲು ಮುಂದಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಫೋಟಕ ಮಾಹಿತಿ.

ಮೊದಲೇ ಪರಿಸರ ಅಸಮತೋಲನ, ಧೂಳಿನಿಂದ ಕಂಗೆಟ್ಟಿರುವ ಹುಬ್ಬಳ್ಳಿಯಲ್ಲಿ ನೂರಾರು ಗಿಡ ಮರಗಳ ಮಾರಣಹೋಮ ನಡೆಸುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಸಸಿ ನೆಟ್ಟು ಪೋಷಿಸಬೇಕಾದ ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯೇ ಈ ಮಾರಣ ಹೋಮಕ್ಕೆ ಅಧಿಕೃತ ಅನುಮತಿಯ ಮುದ್ರೆ ಒತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕಾಂಪೌಂಡ್‌ಗೆ ಮರದ ಬೇರು ಅಡ್ಡಿಯಾಗಿದೆ. ಕಟ್ಟಡದ ಸಮೀಪ ಬೇರು ಹಾದುಹೋಗಿದೆ. ಕಟ್ಟಡಕ್ಕೆ ರೆಂಬೆ ತಾಗುತ್ತಿದೆ, ಹೀಗೆ ಹಲವು ಕಾರಣಗಳಿಗೆ ಅರಣ್ಯ ಇಲಾಖೆ ನಗರದ ವಿವಿಧ ಬಡಾವಣೆಗಳಲ್ಲಿ ನೂರಾರು ಮರಗಳನ್ನು ಕಡಿಯುವುದಕ್ಕೆ ಪರವಾನಗಿ ನೀಡಿದೆ. ಕೇಶ್ವಾಪುರ ಕುಸುಗಲ್‌ ರಸ್ತೆ, ಗೋಕುಲ ರಸ್ತೆ, ವಿದ್ಯಾನಗರ, ಅಶೋಕನಗರ, ನವನಗರ, ಸೇರಿದಂತೆ ನಗರದ ವಿವಿಧೆಡೆ ನೂರಾರು ಗಿಡ- ಮರಗಳು, ರೆಂಬೆ- ಕೊಂಬೆಗಳನ್ನು ಕಡಿಯಲು ಹಸಿರು ನಿಶಾನೆ ದೊರೆತಿದೆ.

ಒಂದು ಮಾಹಿತಿ ಪ್ರಕಾರ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಎರಡು ಹಂತದಲ್ಲಿ 112 ಜಂಗ್ಲಿ ಮರಗಳನ್ನು ಹಾಗೂ 78 ಟೊಂಗೆಗಳನ್ನು ಕಡಿಯಲು ಬಹಿರಂಗ ಹರಾಜು ನೀಡಿದ್ದಾರೆ. ಇದರಲ್ಲಿ ಬೇವಿನ ಮರವೊಂದಕ್ಕೆ-2,000 ರೂ. ರೇಂಟ್ರಿ ಮರಕ್ಕೆ 7,000 ರೂ., ಗುಲ್‌ಮೊಹರ್ 2,000 ರೂ., ಫೆಲ್ಟೊಫಾರಂ 4,000 ರೂ., ಕರಿಜಾಲಿ 1,000 ರೂಪಾಯಿಯಂತೆ ಹರಾಜು ಹಾಕಲಾಗಿದೆ. ಆದರೆ, ಮರ ಕಡಿಯುವಂತೆ ಎಷ್ಟು ಅರ್ಜಿ ಬಂದಿದ್ದವು. ಅದರಲ್ಲಿ ಎಷ್ಟಕ್ಕೆ ಅನುಮತಿ ನೀಡಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದರೆ ವಿಪರ್ಯಾಸಕರ ಸಂಗತಿ ಅಂದ್ರೆ ಅಪಾಯಕಾರಿ ಅಥವಾ ತೀರಾ ಅನಿವಾರ್ಯ ಎಂಬ ಗಿಡಗಳನ್ನು ಮಾತ್ರ ಕಡಿಯಬೇಕು. ಇಲ್ಲವೇ ಕೇವಲ ಟೊಂಗೆಯನ್ನು ಮಾತ್ರ ಕಡಿಯಬೇಕು ಎಂಬ ನಿಯಮ ಇದ್ದರೂ ಗಟ್ಟಿಮುಟ್ಟಾಗಿರುವ ಗಿಡಗಳನ್ನು ಅನಗತ್ಯವಾಗಿ ಕಡಿಯುವ ಮೂಲಕ ಪರಿಸರ ಹಾಳು ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

28/07/2022 07:00 pm

Cinque Terre

49.32 K

Cinque Terre

0

ಸಂಬಂಧಿತ ಸುದ್ದಿ