ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಉಕ್ಕಿ ಬಂದ ಹಳ್ಳ, ಟ್ಯಾಕ್ಟರ್ ಮೂಲಕ ಹಳ್ಳ ದಾಟಿದ ಮಕ್ಕಳು

ನವಲಗುಂದ: ನವಲಗುಂದದಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲ್ಲೂಕಿನ ಹಲವು ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿಯುತ್ತಿವೆ. ನವಲಗುಂದ ಪಟ್ಟಣದಿಂದ ಇಬ್ರಾಹಿಂಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿದ್ದ ಹಳ್ಳ ತುಂಬಿ ಬಂದಿದೆ.

ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹಾಗೂ ರೈತರು ಜಮೀನುಗಳಿಗೆ ತೆರಳಲಾಗದೆ ಪರದಾಡ್ತಿದ್ದಾರೆ. ಮಕ್ಕಳನ್ನು ಟ್ರ್ಯಾಕ್ಟರ್ ಮೂಲಕ ಹಳ್ಳದಾಟಿಸುವಂತಹ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಆದ್ರೆ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು ಎಂಬ ಪ್ರಶ್ನೆ ಪಾಲಕರಲ್ಲಿ ಹುಟ್ಟಿಕೊಂಡಿದೆ.

ಸಂಪೂರ್ಣ ರಸ್ತೆಯಲ್ಲಿ ನೀರು ಆವರಿಸಿದ್ದು, ರಸ್ತೆ ಬಂದ್ ಆಗಿದೆ. ಈ ಹಿನ್ನೆಲೆ ಈ ರಸ್ತೆಗೆ ಇರುವಂತಹ ಎರಡು ಹಳ್ಳಕ್ಕೂ ಕಿರು ಸೇತುವೆ ನಿರ್ಮಾಣವಾದಲ್ಲಿ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

28/07/2022 02:33 pm

Cinque Terre

65.92 K

Cinque Terre

1

ಸಂಬಂಧಿತ ಸುದ್ದಿ